ಉರಿವ ಚಂದಿರ

Author : ಸ್ನೇಹಲತಾ ಗೌನಳ್ಳಿ

Pages 99

₹ 100.00




Year of Publication: 2019
Published by: ಕಾವ್ಯಮನೆ ಪ್ರಕಾಶನ
Address: #220, ವೀರೇಂದ್ರ ಪಾಟಿಲ್ ಬಡಾವಣೆ, 1ನೇ ಬ್ಲಾಕ್, ಸೇಡಂ ರೋಡ್, ಕಲಬುರಗಿ-585105
Phone: 7829464653

Synopsys

ಸ್ನೇಹಲತ ಗೌನಳ್ಳಿ ಅವರ ಗಜಲ್ ಸಂಕಲನ ‘ಉರಿವ ಚಂದಿರ’. ‘ಸೂಕ್ಷ್ಮ ಸಂವೇದನೆ ಮತ್ತು ಭಾವನೆಗಳುಳ್ಳ ಕಾವ್ಯ ಪರಂಪರೆ ಗಜಲ್. ಒಂದು ಕಾಲದಲ್ಲಿ ಕೇವಲ ಪ್ರೇಮ, ಮೋಹ, ಅಮಲಿನ ಸುತ್ತಾ ಜಾಲಿಯಾಗಿದ್ದ ಕೆಲವು ವರ್ಷಗಳ ಕಾಲ ಜನಾಬ್ ರಿಂದ ದೂರವಾಗಿತ್ತು. ವಾಸ್ತವಜದಲ್ಲಿ ಗಜಲ್ ಕಾವ್ಯ ಕಂದೀಲು ಹಚ್ಚಿ ಹುಡುಕುವ ಪರಿಸ್ಥಿತಿ ತಂದೊಡ್ಡಿಕೊಂಡಿತ್ತು. ಆದರೆ ಇತ್ತೀಚೆಗೆ  ಗಜಲ್ ಹನಿಯಾಗಿ, ಹಳ್ಳವಾಗಿ ಹೊಳೆಯಾಗಲು ಹೊರಟಿರುವುದು ನೋಡಿದರೆ ಖುಷಿಯಾಗುತ್ತಿದೆ’ ಎನ್ನುತ್ತಾರೆ ಕವಿ ಅಲ್ಲಾ ಗಿರಿರಾಜ್. 

ಈಗೀಗ ಕನ್ನಡ ಗಜಲ್ ಸಾಹಿತ್ಯದಲ್ಲಿ ಸಾಕಷ್ಟು ಹೊಸ ಪ್ರಯೋಗಗಳು ಆರಂಭವಾಗಿವೆ. ಹೊಸ ಹೊಸ ಕವಿಗಳು ಅದ್ಬುತವಾಗಿ ಗಜಲ್ ರಚಿಸುತ್ತಿದ್ದಾರೆ. ಅವರಲ್ಲಿ ಸ್ನೇಹಲತ ಒಬ್ಬರು. ಮನದ ಧ್ಯಾನದಲ್ಲಿ ಗಜಲ್ ತೀಡುವ ಕಲೆ ಅವರಿಗೆ ಪ್ರಮುಖವಾಗಿದ್ದು ಸತ್ಯ. ಏಕೆಂದರೆ ಸ್ನೇಹಲತಾ ತುಂಬಾ ಸೂಕ್ಷ್ಮ ಮನಸ್ಸಿನ ಕಾವ್ಯ ಪ್ರತಿಭೆ. ಅವರ ಉರಿವ ಚಂದಿರ ಕನ್ನಡ ಗಜಲ್ ಸಾಹಿತ್ಯಕ್ಕೆ ಒಂದೊಳ್ಳೆ ಸೇರ್ಪಡೆ ಎನ್ನಬಹುದು. 

About the Author

ಸ್ನೇಹಲತಾ ಗೌನಳ್ಳಿ
(15 April 1991)

ಸ್ನೇಹಲತಾ ಗೌನಳ್ಳಿ ಕಲಬುರ್ಗಿಯ ಚಿಂಚೋಳಿ ತಾಲ್ಲೂಕು ಐನೋಳ್ಳಿ ಗ್ರಾಮದವರು. ಸರಕಾರಿ ಶಾಲೆಯಲ್ಲಿ ಒಂದರಿಂದ ಹತ್ತನೇಯ ತರಗತಿವರೆಗೆ ಓದಿದ್ದು ಐನೋಳ್ಳಿಯಲ್ಲಿಯೇ. ಕೌಟುಂಬಿಕ ಕಾರಣಗಳಿಂದ ಐನೋಳ್ಳಿ ಬಿಟ್ಟು ಚಿಂಚೋಳಿಗೆ ಬರಬೇಕಾಯಿತು. ಮುಂದಿನ ವಿದ್ಯಾಭ್ಯಾಸ ಚಿಂಚೋಳಿಯ ಕನ್ಯಾ ಪಿಯುಸಿ ಕಾಲೇಜು ಮತ್ತು ಸಿ.ಬಿ.ಪಾಟೀಲ್ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿದರು, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಕನ್ನಡದಲ್ಲಿ ಎಂ.ಎ. ಮುಗಿಸಿದರು. ಹಿಂಗುಲಾಂಬಿಕ ಕಾಲೇಜಿನಲ್ಲಿ ಬಿ.ಎಡ್.ಪದವಿ ಪಡೆದರು. ಎರಡು ವರ್ಷ ಚಿಂಚೋಳಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಯೊಂದರ ತಯಾರಿಯಲ್ಲಿದ್ದಾರೆ.ಜೊತೆ ಜೊತೆಗೆ ಸಾಹಿತ್ಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ...

READ MORE

Related Books