ಹಿಮದೊಡಲ ಬೆಂಕಿ

Author : ಅರುಣಾ ನರೇಂದ್ರ

Pages 88

₹ 80.00




Year of Publication: 2019
Published by: ಸಿದ್ದಾರ್ಥ ಪ್ರಕಾಶನ
Address: ಸಿದ್ದಾರ್ಥ ಪ್ರಕಾಶನ, ನಂದಿನಗರ, ಕೊಪ್ಪಳ - 583231
Phone: 9845017316

Synopsys

ಹೈದರಾಬಾದ್ ಕರ್ನಾಟಕದ ಲೇಖಕಿ ಅರುಣಾ ನರೇಂದ್ರ ಅವr ಎರಡನೇ ಗಜಲ್ ಸಂಕಲನ- ಹಿಮದೊಡಲ ಬೆಂಕಿ. ಒಟ್ಟು 61 ಗಜಲ್ ಗಳಿವೆ. ಶಾಂತಿ, ನೆಮ್ಮದಿ, ಮಾನವೀಯ ಮೌಲ್ಯ, ಬದುಕಿನ ಸುಖ ದುಃಖಗಳಿಗೆ ಸಂಬಂಧಿಸಿದ ಗಜಲ್ ಗಳೇ ಹೇರಳವಾಗಿದೆ. ಲೇಖಕಿಯು ಹಿಂದಿ ಅಧ್ಯಾಪಕಿ. ಆದ್ಯಾದರಿಂದ, ಉರ್ದು ಪದಗಳನ್ನು ಗಜಲ್ ಗಳಲ್ಲಿ ಬಳಸುವ ಮೂಲಕ ಗಜಲ್ ಗಳಿಗೆ ಹೆಚ್ಚಿನ ಮೆರಗು ತಂದಿದ್ದಾರೆ.

About the Author

ಅರುಣಾ ನರೇಂದ್ರ
(15 July 1968)

ಕವಯತ್ರಿ ಅರುಣಾ ನರೇಂದ್ರ ಅವರು 15 ಜುಲೈ 1968 ಬಾಗಲಕೋಟೆಯಲ್ಲಿ ಜನಿಸಿದರು. ’ಮುದ್ದಿನ ಗಿಣಿ, ಪಾಟಿಚೀಲ, ಬೆಕ್ಕಣ್ಣನ ಉಪಾಯ, ಅಮ್ಮನ ಸೆರಗು, ರಸದ ತೆನೆ, ಧೀರ ಬೀರೇಶ್ವರ ವಚನಗಳು’ ಅವರ ಪ್ರಮುಖ ಕೃತಿಗಳು. 'ಬೆಕ್ಕಣ್ಣನ ಉಪಾಯ' ಮಕ್ಕಳ ಸಾಹಿತ್ಯ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಗುಣಸಾಗರಿ ನಾಗರಾಜು ದತ್ತಿನಿಧಿ ಬಹುಮಾನ, ಪಂಡಿತ ಪುಟ್ಟರಾಜ ಸಾಹಿತ್ಯ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗಳು ಅವರ ಮುಡಿಗೇರಿವೆ. ...

READ MORE

Related Books