ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಕೃತಿ ‘ನಲವತ್ತು ಗಜಲುಗಳು’. ‘ಅರ್ಧ ರಾತ್ರಿಯಲಿ ಯಾರ ನೆನಪಾಯಿತೆಂದು ತಂಗಾಳಿಯು ಕೇಳಿತು. ಇನ್ನುಳಿದ ರಾತ್ರಿಯನ್ನು ಕಳೆಯುವುದು ಹೇಗೆಂದು ಕಂಬನಿಯು ಕೇಳಿತು.' ‘ಯಾವ ನೋವಿನಲ್ಲಿ ಹೇಗೆ ಇರುವೆನೆಂದು ಈ ಜಗಕೇನು ಗೊತ್ತು ಯಾರಿಗೂ 'ಲೆಕ್ಕ ನೀಡಬೇಕಿಲ್ಲ ಏಳು ಬಟ್ಟಲು ತುಂಬು ಸಾಕಿ.' ‘ನನಗಾಗಿ ಯಾರೂ ಕರಗಿ ಉರಿಯಲಿಲ್ಲ. ಆದರೂ ನನ್ನ ಮೇಲೆ ಜಗದ ಕಾವಲಿದೆ.' ‘ಲೋಕದಲ್ಲಿ ಇಂದು ದೀರ್ಘ ಕತ್ತಲೆಯು ಕವಿದಿಹುದು ಎಂದೆಂದೂ ಮುಳುಗದ ಮುಂಜಾವುಗಳು ಅರಳಲಿ’ ಇಂತಹ ಸಾಲುಗಳನ್ನೊಳಗೊಳಗಂಡ ನಲವತ್ತು ಗಜಲುಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಹೊಸತು- ಜುಲೈ -2003
ಉರ್ದು ಕಾವ್ಯಗಳಾದ ಗಜಲ್ ಗಳು ಭಾರತದಲ್ಲಿ ಮೊಗಲ ಚಕ್ರವರ್ತಿಗಳ ಕಾಲದಲ್ಲಿ ಬಹುಜನಪ್ರಿಯವಾಗಿ ಗಜಲ್ ಕವಿ ಗಾಯಕರಿಗೂ ಮನ್ನಣೆ ದೊರೆಯಿತು. ಮಧುಶಾಲೆ - ಪ್ರಣಯ - ವಿರಹ - ಉನ್ಮಾದಗ ಸುತ್ತ ಮಾತ್ರ ಗಿರಕಿ ಹೊಡೆಯುತ್ತಿದ್ದ ಗಜಲ್‌ಗಳನ್ನು ಅಲ್ಲಿಂದ ಇತರ ವಿಷಯಗಳಿಗೂ ವಿಸ್ತರಿಸಿ ಕನ್ನಡದಲ್ಲಿಯೇ ಸ್ವತಂತ್ರವಾಗಿ ಓದುವ ಅವಕಾಶ ಕಲ್ಪಿಸಿದವರು ಶ್ರೀಮ ಮುಕ್ತಾಯಕ್ಕ, ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವ ರೇಖಾ ಚಿತ್ರಗಳ ಸೂಕ್ಷ್ಮ ಕುಸುರಿ ಕೆಲಸದಿಂದ ಕಂಗೊಳಿಸುತ್ತವೆ.
©2024 Book Brahma Private Limited.