ಕವಿ ಬಸವರಾಜ ಕಾಸೆ ಅವರು ಬರೆದ ಗಜಲ್ ಗಳ ಸಂಕಲನ-ವಿಜಲ್ ವಿಜಲು ಗಜಲ್ ಘಮಲು. ಕವಿಯು ತಮ್ಮ ಪ್ರಸ್ತಾವನೆಯಲ್ಲಿ ‘ಗಜಲ್ ತನ್ನ ವಿಭಿನ್ನ ದೃಷ್ಟಿಕೋನದಿಂದ ಭಾವ ತೀವ್ರತೆಯನ್ನು ಹೆಚ್ಚಿಸುವ ಸೂಕ್ಷ್ಮ ಸಂಗತಿಗಳ ಪರಿಣಾಮಕಾರಿ ನಿರೂಪಣೆಗಳನ್ನು ಒಳಗೊಂಡಿದ್ದೂ ಕಾವ್ಯಾತ್ಮಕ ವಸ್ತು ವಿಷಯಗಳನ್ನು ಹೆಚ್ಚೆಚ್ಚು ಬಳಸಿಕೊಳ್ಳಲು ಪ್ರಯತ್ನಿಸಿರುವೆ. ಕ್ರಮಸಂಖ್ಯೆಯೊಂದಿಗೆ ಪ್ರತಿ ಗಜಲ್ ಸಹ ಆಕರ್ಷಕ ಶೀರ್ಷಿಕೆಗಳಿಂದ ಕೂಡಿವೆ. ಗಜಲ್ ನ 9 ಪ್ರಕಾರಗಳನ್ನು ದುಡಿಸಿಕೊಂಡಿದ್ದೂ ಪ್ರತಿಯೊಂದು ಸಹ ಅಳೆದು ತೂಗಿ ಗುಣ ಲಕ್ಷಣಗಳಿಗೆ ಅನುಗುಣವಾಗಿ ನಿಯಮಬದ್ಧತೆಯಿಂದ ಕೂಡಿದ ಒಟ್ಟು 62 ಗಜಲ್ ಗಳಿವೆ. 1 ರಿಂದ 30 ರವರೆಗಿನ ಗಜಲಗಳು ಮುರದ್ಧಪ್ ಗಜಲಗಳಾಗಿದ್ದರೆ 31 ರಿಂದ 40ರವರೆಗಿನ ಗಜಲಗಳು ಕಾಫಿಯಾನಾ ಗಜಲಗಳಾಗಿವೆ. 41 ರಿಂದ 50ರವರೆಗಿನವು ಜುಲ್ ಕಾಫಿಯಾ ಗಜಲಗಳು, 51ನೇಯದು ವಿಶೇಷ ಕಾಫಿಯಾನಾ ಮತ್ತು 52 ನೇಯದು ಕಾಫಿಯಾನಾ ಪ್ರಧಾನ ಗಜಲ್ ಆಗಿವೆ. 53ನೇ ಗಜಲ್ ಆಜಾದ್ ಗಜಲ್ ಆಗಿದೆ. 54ನೇ ಗಜಲ್ ತೆಹರಿ ಗಜಲ್ ಆಗಿದ್ದೂ ಇಲ್ಲಿ ಒಬ್ಬ ಕವಿ ಬರೆದ ಒಂದು ಸಾಲು ಅಥವಾ ಒಂದು ಮಿಸ್ರಾವನ್ನು ತೆಹರಿ ಗಜಲ್ ಆಗಲು ಬಳಸಿಕೊಳ್ಳಲಾಗುತ್ತದೆ. ಅಂತೆಯೇ ಇಲ್ಲಿ ಸಮ್ಮತಿಯೊಂದಿಗೆ ಡಾ. ಗೋವಿಂದ ಹೆಗಡೆ ಅವರ ಮತ್ಲಾವನ್ನು ನನ್ನ ಈ ತೆಹರಿ ಗಜಲ್ ಒಳಗೊಂಡಿದೆ. ಇನ್ನೂ 55 ರಿಂದ 58ರವರೆಗಿನ ಗಜಲಗಳು ಸಂಪೂರ್ಣ ಮತ್ಲಾ ಗಜಲಗಳಾಗಿವೆ. 59 ರಿಂದ 61 ನೇ ವರೆಗಿನ ಗಜಲಗಳು ಝೆನ್ ಗಜಲಗಳು ಮತ್ತು 62 ನೇ ಗಜಲ್ ಸೆಹ್ ಗಜಲ್ ಆಗಿದೆ' ಎಂದು ವಿವರಿಸಿದ್ದಾರೆ.
©2024 Book Brahma Private Limited.