ಶರೀಫ್ ಹಸಮಕಲ್ ಅವರ ಗಜಲ್ ಸಂಕಲನ 'ಕಣ್ಣ ಬೊಗಸೆಯಲ್ಲಿ' ಈ ಹೆಸರೇ ಏಶಿಷ್ಟವಾಗಿದೆ. ಕಏತೆ ಬರೆವ ಕೈ ಮಧುರ ಗಜಲ್ ರೂಪವನ್ನೂ ಒಅಸಿಕೊಳ್ಳಲು ಯತ್ನಿಸಿದಂತಿದೆ. ಕವಿಯ ಕಣ್ಣ ಬೊಗಸೆಯಲ್ಲಿ ರಾಶಿಪ್ರೀತಿ, ವಿರಹದ ಸುಷು ಸುಖದ ಯಾತನೆ ಮಧುಬಟ್ಟಲಿನ ಘಮಱದೆ. ಕನಸಿನ ಹೂವು ಪಕಳೆ, ನೀಲಾಕಾಶದ ನಿಹಾಲಕಗಳ ನೋವು, ಮಳೆಚಿಲ್ಲ ಸೊಬಗು, ಪೈಜಾಣದ ಇಂಪು, ಬೆಚ್ಚನೆಯ ಸ್ಪರ್ಷದಂತಹ ನವಿರು ಭಾವಗಳವೆ. ಇವೆಲ್ಲವುಗಳೊಂದಿಗೆ ದಿಕ್ಕೆಟ್ಟ ಸಾಮಾಜಿಕ ವ್ಯವಸ್ಥೆಯ ಬಗೆಗೆ ಕನಲುವ ಕಏ ದುಡಿವ ವರ್ಗದ ತಳಮಳ, ಸಮುದಾಯದ ಚಹರೆಗಳನ್ನು ಸುಡುವ ವರ್ತಮಾನದ ಚಿಕ್ಕಟ್ಟುಗಳನ್ನು ಬಿಡಿಸಿಟ್ಟಿದ್ದಾರೆ. ಸಂಕಲನದಲ್ಲಿ ಇಲ್ಲಲ್ಲಿ ಭಾವತೀವ್ರತೆ ಹಿಂದೆ ಸರಿದು, ತಾತ್ವಿಕತೆಯ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಕೇಡನ್ನು ಎದುರಿಸುವ ಅಭಿವ್ಯಕ್ತಿಯಲ್ಲಿ ದಿಟ್ಟತೆ, ಪ್ರಾಮಾಣಿಕತೆ ಇದೆ. ಸುತ್ತಲಿನ ಹಿಂಸೆ ಅಸಹನೆ ಅಸಹಿಷ್ಣುತೆಗೆ ಪ್ರತಿರೋಧವನ್ನು ಒಡ್ಡುವಲ್ಲಿ ಬಹುತ್ವದ ಸಾಮರಸ್ಯದ ನಿಲುವುಗಳನ್ನು ಎತ್ತಿ ಹಿಡಿದಿದ್ದಾರೆ. ಪ್ರತಿಮೆ, ರೂಪಕ, ನೆಲದ ಭಾಷೆ, ಹೊಸ ನೋಟವನ್ನು ದಕ್ಕಿಸಿಕೊಳ್ಳಲು ಹುರುಪಿನಿಂದ ಹುಡುಕಾಟ ನಡೆಸಿರುವ ಈ ಕಏಗೆ ಭೂತದ ಎಚ್ಚರ, ವರ್ತಮಾನದ ಬಗೆಗೆ ಅರಿವಿರುವುದು ಇಲ್ಲಿ ನಿಚ್ಚಳವಾಗಿದೆ. ಖಾಸಗಿ ಸ್ಪಂದನೆಗಳ ಆಚೆಗೂ ಲೋಕದ ಕೋಲಾಹಲಗಳಿಗೆ ಮಿಡಿವ ಹಸಮಕಲ್ ಆ ಕಾರಣಕ್ಕೆ ಇಷ್ಟವಾಗುತ್ತಾರೆ. ಕತ್ತಲೆಯ ಹಾದಿಗೆ ಹಚ್ಚಿಟ್ಟ ಹಣತೆಗಳಂತಿರುವ ಈ ಗಜಲ್‌ಗಳು ಸದಾ ಅರಿವಿನ ಬೆಳಕನ್ನು ಹೀಗೆ ಹಂಚುತ್ತಿರು ಎಂದು ಆಶಿಸುವೆ ಎಂದು ದಸ್ತಗೀರಸಾಬ್ ದಿನ್ನಿ ಅವರು ತಿಳಿಸಿದ್ದಾರೆ.
©2024 Book Brahma Private Limited.