‘ಆತ್ಮಧ್ಯಾನದ ನಾದ’ ಅಬ್ದುಲ್ ಹೈ ತೋರಣಗಲ್ಲು ಅವರ ಗಜಲ್ ಸಂಕಲನ. ಈಸಂಕಲನಕ್ಕೆ ಕವಿ ಅಲ್ಲಾಗಿರಿರಾಜ್ ಕನಕಗಿರಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಯುವ ಬರಹಗಾರರ ಪಾಲಿಗೆ ಕಾಲುದಾರಿಯ ಕಂದೀಲಾಗಿ, ಮನೆಗೆ ಯಜಮಾನಂತೆ ಸದಾ ಆಶಯ ನುಡಿಗಳನ್ನಾಡುವ ಹೈ ತೋ ಈಗ ಗಜಲ್ ಗರಡಿ ಮನೆಯಲ್ಲಿ ಕಾಣಿಸಿಕೊಂಡು ಆತ್ಮಧ್ಯಾನದ ನಾದದ ಮೂಲಕ ಏಕತಾರಿ ಹಿಡಿದು ಹೊರಟಿದ್ದು ಯೋಗಾ ಯೋಗ’ ಎನ್ನುತ್ತಾರೆ ಅಲ್ಲಾಗಿರಿರಾಜ್ ಕನಕಗಿರಿ. ಜೊತೆಗೆ ಕಥೆ, ಕವನ ಕಾದಂಬರಿ ವಿಮರ್ಶೆ ನಾಟಕದೊಳಗಿನ ದನಿಯಾಗಿದ್ದ ಹೈ ತೋ ಅವರ ಗಜಲ್ ದಾಟಿಯೂ ಸೂಕ್ಷ್ಮ ಸಂವೇದನೆಯ ಆತ್ಮ ದ್ಯಾನವಾಗಿದೆ. ಪ್ರೀತಿ ಇಲ್ಲದೆ ಏನು ಇಲ್ಲ ಎನ್ನುವ ತತ್ವಾದರ್ಶನಗಳನ್ನು ಪಾಲಿಸುವ ಕಾವ್ಯನವೆ ವಿಚಾರಧಾರೆ ಹಂಚಿಕೊಂಡ ಹೈ ತೋ ಅವರು ಈಗಗಾಗಲೇ ಅನೇಕ ಕೃತಿಗಳ ಮೂಲಕ ಪದಕ್ಕೆ ಪದ ಕಟ್ಟಿ ಹಾಡಿದ್ದಾರೆ. ಈಗ ಆತ್ಮ ಧ್ಯಾನದ ನಾದದೊಂದಿಗೆ ಗಜಲ್ ಕಾವ್ಯ ಪ್ರಕಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಓದುಗರ ಮುಂದೆ ಸಂದಲ್ ಆಗಬಯಸುವ ಅವರ ಮೊದಲ ಕಸರತ್ತಿಗೆ ನನ್ನದೊಂದು ಧ್ಯಾನದ ಸಲಾಂ ಇರಲಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.