ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಅವರ ಚೊಚ್ಚಲ ಕೃತಿ ’ಕನಸು ಕನ್ನಡಿ’ ಗಜಲ್ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದ ಎಸ್. ಎನ್. ಸೇತುರಾಂ, `ಬೆಳಕಿಲ್ಲದ ದಾರಿಯಲ್ಲಿ ಸಾಗಬಹುದು. ಮರು ಕನಸುಗಳೇ ಇಲ್ಲದ ದಾರಿಯಲ್ಲಿ ಸಾಗುವುದಾದರೂ ಹೇಗೆ? ದಿವಂಗತ ಗಿರೀಶ್ ಕಾರ್ನಾಡರ ಯಯಾತಿಯ ಮಾತು. ಕನಸ ಭಾವ ಕಾಡದ ಮನಸ್ಸು ಮನಸ್ಸೇ ಅಲ್ಲ! ಬೆನ್ನಟ್ಟದ ಬದುಕು ಬದುಕೇ ಅಲ್ಲ ! ಆದರೊಂದು, ಕನಸು ಯಾವತ್ತೂ ಅಸ್ಪಷ್ಟ, ಅಮೂರ್ತ, ಬದುಕು ಎಲ್ಲ ಸಾಧನೆಗಳ ತುಲನೆ. ಮೂರ್ತ ಮಾಪನದ ಹಂಗಲ್ಲಿರುವಾಗ ಅಮೂರ್ತ ಕನಸುಗಳು ಸಾಕಾರವಾಗುವುದಾದರೂ ಹೇಗೆ? ವರ್ತಮಾನದ, ವಾಸ್ತವದ ತೃಪ್ತಿಯಲ್ಲಿ ಕತ್ತಲ ನಿದ್ದೆ! ಭವಿಷ್ಯದ ಕನಸುಗಳ ಅತೃಪ್ತಿಯಲ್ಲಿ ಹಗಲ ಎಚ್ಚರ! ಈ ದ್ವಂದ್ವದಲ್ಲಿ ಕೆರಳಿದ ಎಲ್ಲ ಭಾವಗಳು ಈ ಗಜಲ್‌ಗಳಲ್ಲಿ ಜೀವಂತವಾಗಿವೆ.’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.