ಮಹಾಂತೇಶ ಗೋನಾಲ ’ದಣಿದ ಮೌನ’ ಕೃತಿಯು ಗಜಲ್ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ನಾಡೋಜ ಬರಗೂರು ರಾಮಚಂದ್ರಪ್ಪ ಅವರು, ’ದಣಿದ ಮೌನ’ ಎಂಬ ಗಜಲ್ ಸಂಕಲನವು ಅವರ ಕಾವ್ಯ ಪ್ರತಿಭೆಯ ಪ್ರಭೆಯನ್ನು ಬೆಳಗುವ ಕೆಲವು ರಚನೆಗಳಿಂದ ಕೂಡಿದೆ. ಮೌನವೇ ಮಾತಾಗಿರುವ ಈ ರಚನೆಗಳಲ್ಲಿ ವಿಷಾದ, ಉತ್ಸಾಹ ಮತ್ತು ವಿವೇಕಗಳು ಮುಪ್ಪುರಿಗೊಂಡಿವೆ. ಮೌನದೊಳಗಿನ ಉರಿಯನ್ನು ಮತ್ತು ಸುಡುವ ಅನುಭವದ ಪರಿಯನ್ನು ಸಂಯಮದ ಅಭಿಯುಕ್ತಿಯಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ಸಂಕಲನವು ಸಮರ್ಥವಾಗಿ ಧ್ವನಿಸುತ್ತದೆ. ಗಜಲ್ ಗಳಿಗೆ ಮಾನ್ಯವೆಂದು ಭಾವಿಸುತ್ತಾ ಬಂದಿರುವ ಪ್ರೇಮ, ವಿರಹ, ವಿಷಾದ, ವೈರಾಗ್ಯ, ವೈರುಧ್ಯಗಳಲ್ಲದೆ ಸಾಮಾಜಿಕ ಸಂಕಟಗಳನ್ನು ಸಂಕೇತಿಸುವ ಮತ್ತು ರೂಪಕಾತ್ಮಕಗೊಳಿಸುವ ಕೆಲವು ವಿಶಿಷ್ಟ ರಚನೆಗಳಿಂದ ಮಹಾಂತೇಶ ಗೋನಾಲ ಕಾವ್ಯಕ್ಕೊಂದು ಸಾಮಾಜಿಕ ಸಾಕ್ಷಿತನದ ಸೃಜನಶೀಲ ಗುಣ ಲಭ್ಯವಾಗಿದೆ. ಈ ಗಜಲ್ ಸಂಕಲನದ ಮೂಲಕ ಮಹಾಂತೇಶ ಗೋನಾಲರು ಒಬ್ಬ ಗಮನಾರ್ಹ ಕವಿಯಾಗಿ ಹೊರ ಹೊಮ್ಮಿದ್ದಾರೆ.
©2024 Book Brahma Private Limited.