ನಾಗೇಶ್ ಜೆ ನಾಯಕ್ ಅವರ ಗಜಲ್ ಗಳ ಸಂಕಲನ ‘ಆತ್ಮ ಧ್ಯಾನದ ಬುತ್ತಿ’. ನಾಗೇಶ್ ಅವರು ಕನ್ನಡ ಸಾಹಿತ್ಯದಲ್ಲಿ ಈಗಾಗಲೇಕವಿಯಾಗಿ, ಕತೆಗಾರರಾಗಿ, ಪ್ರಬಂಧಕಾರರಾಗಿ, ಅಂಕಣಕಾರರಾಗಿ,ವಿಮರ್ಶಕರಾಗಿ,ಹನಿಕವಿಯಾಗಿ,ಪ್ರೇಮಕವಿಯಾಗಿ ಪ್ರಸಿದ್ಧರು. ಗಝಲ್ ನಲ್ಲಿ ಇದು ಅವರ ಎರಡನೇ ಕೃತಿ. ಸದಾ ಕಾಲಕ್ಕೂ ಲೋಪ ದೋಷ ,ಒಳ್ಳೆಯ ಕೆಟ್ಟ ವಿಚಾರ, ವ್ಯಕ್ತಿ ಗಳು ಸಾಮಾಜಿಕ ಪ್ರಪಂಚದಲ್ಲಿ ಸರ್ವೇಸಾಮಾನ್ಯ. ಅವರಿಗೆ ಜೀವನದಾದರ್ಶಗಳ ಕಡೆ ಮನ ಮಾಡುವ ಜವಾಬ್ದಾರಿ ಕವಿಗಳ ಮೇಲಿದೆ. ಆ ಕೆಲಸ ಈ ಕೃತಿಯ ಮೂಲಕ ನಾಗೇಶ್ ಮಾಡಿದ್ದಾರೆ. ಶ್ರೀ ಡಾ.ಎಚ್ ಎಸ್ ಸತ್ಯ ನಾರಾಯಣ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.
©2025 Book Brahma Private Limited.