ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗಜಲ್ ರಚನಾ ಕಮ್ಮಟವನ್ನು ಹಮ್ಮಿಕೊಂಡಿತ್ತು. ಅದರ ನಿರ್ದೇಶಕರಾಗಿದ್ದವರು ಕವಿ ಚಿದಾನಂದ ಸಾಲಿ.
ಗಜಲ್ ಬಗೆಗೆ ಅಗ್ರಮಾನ್ಯ ಸಾಹಿತಿಗಳು ಬರೆದ ಲೇಖನಗಳು ಹಾಗೂ ಕಮ್ಮಟದಲ್ಲಿ ರಚನೆಯಾದ ಗಜಲ್ ಕಾವ್ಯವವನ್ನು ಒಗ್ಗೂಡಿಸಿ ಸಂಕಲನ ಹೊರಬಂದಿದೆ. ಕನ್ನಡದಲ್ಲಿ ಛಂದಸ್ಸು, ಸವಾಲು, ನಿರೀಕ್ಷೆ ಇತ್ಯಾದಿ ಎಲ್ಲಾ ಮಗ್ಗುಲುಗಳಿಂದ ಸಾದ್ಯಂತವಾಗಿ ಪರಿಶೀಲಿಸುವ ಗಜಲ್ ಕುರಿತ ಮೊಟ್ಟಮೊದಲ ಪರಾಮರ್ಶನಾ ಗ್ರಂಥ ಇದು. ಗಜಲ್‌ಗೆ ಉರ್ದುವಿನ ಕೊಡುಗೆ, ಉಳಿದ ಕಾವ್ಯಕ್ಕೂ ಗಜಲ್‌ಗೂ ಇರುವ ವ್ಯತ್ಯಾಸ, ಅನುವಾದದ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನೂ ಕೃತಿ ವಿವರಿಸುತ್ತದೆ.
©2024 Book Brahma Private Limited.