‘ಗರೀಬನ ಜೋಳಿಗೆ’ ಲೇಖಕ ನಾಗೇಶ್ ಜೆ. ನಾಯಕ ಅವರ ಮೊದಲ ಗಜಲ್ ಸಂಕಲನ. ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರು ಮುನ್ನುಡಿ ಬರೆದ್ದು ‘ ಸರಳತೆಯ ಭಾವನೆಗಳನ್ನು ಗಜಲ್ ಮಾಡಿರುವ ನಾಗೇಶ್ ನಾಯಕ್, ಬದುಕಿನ ಅನುಭವದ ಜೊತೆಜೊತೆಯಲ್ಲಿ ಲೋಕದ ಅನುಭವಗಳನ್ನು ತಳುಕು ಹಾಕಿಕೊಂಡು ಕಾವ್ಯ ಕಟ್ಟುವ ಧಾಟಿ ಇಷ್ಟವಾಗುತ್ತದೆ. ಇಲ್ಲಿಯ ಗಜಲ್ ಗಳಲ್ಲಿ ಜೀವ ಪ್ರೀತಿಯ ಕವಿ ಮನಸು ತುಂಬಾ ತೂಕವಾದದ್ದು ಎಂದು ಹೇಳುತ್ತಾ, ನಾಗೇಶ್ ನಾಯಕ್ ಅವರು ಕೆಲವು ಗಂಭೀರತೆಯಿಂದ ಹೊರಬಂದು ಗ್ರಾಮ ಭಾಷೆಯ ಸಂಭಾಷಣೆಯಲ್ಲಿ ಗಜಲ್ ರಚಿಸಿದ್ದೇ ಆದರೆ ಖಂಡಿತ ಕನ್ನಡ ಗಜಲ್ ಉಸ್ತಾದರ ಸಾಲಿನಲ್ಲಿ ಸೇರಬಲ್ಲರು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂಕಲನದಲ್ಲಿ ಒಟ್ಟು 70 ಗಜಲ್ ಗಳಿವೆ.
©2024 Book Brahma Private Limited.