‘ಗೋರಿಯೊಳಗಿನ ಉಸಿರು’ ಕವಿ ಈಶ್ವರ ಮಮದಾಪೂರ ಅವರ ಗಜಲ್ ಗಳ ಸಂಕಲನ. ಲೇಖಕ ಸರಜೂ ಕಾಟ್ಕರ್ ಬೆನ್ನುಡಿ ಬರೆದು “ ಸಾಹಿತ್ಯ ಪ್ರಕಾರಗಳಲ್ಲಿಯೇ ಅತ್ಯಂತ ಸೂಕ್ಷ್ಮವಾದ ಪ್ರಕಾರವೆಂದರೆ ಗಜ್ಹಲ್ ಸಾಹಿತ್ಯ ಪ್ರಕಾರ. ಪ್ರಿಯಕರನು ಪ್ರಿಯೆಗೆ ಕಿವಿಯಲ್ಲಿ ಪ್ರೀತಿಯನ್ನು ಪಿಸುಗುಡುವುದನ್ನು ಮತ್ತು ಅವಳು ಅದನ್ನು ಅನುಭವಿಸಿ ಸುಖಿಸುವುದೇ ಗಜ್ಹಲ್. ಹಿಂದಿ ಮತ್ತು ಉರ್ದು ಭಾಷೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ಪ್ರಕಾರ, ಈಗೀಗ ಕನ್ನಡದಲ್ಲಿ ವಿಸ್ತರಿಸುತ್ತಿದೆ. ಮಮದಾಪೂರ ಅವರ ಗಜ್ಹಲ್ ಯಾಕೆ ವಿಶಿಷ್ಟವಾಗುತ್ತವೆ ಎಂದರೆ ಅವರು ಬರೀ ಪ್ರೀತಿ, ಪ್ರೇಮ, ವಿರಹ, ಸಾಕಿ, ಚಂದ್ರ, ಚಕೋರಿಗಳನ್ನು ಮಾತ್ರ ತಮ್ಮ ಗಜ್ಹಲ್ ಗಳಲ್ಲಿ ತರುವುದಿಲ್ಲ. ಸಾಮಾಜಿಕ ಅನಿಷ್ಠಗಳಾದ ಬಡತನ, ಪರಿಸರ ಮಾಲಿನ್ಯ, ನಗರೀಕರಣದ ಶಾಪ, ಜಾತಿ, ವರ್ಣಭೇದ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆಯೂ ಅವರು ಗಜ್ಹಲ್ ಗಳ ಮೂಲಕ ಧ್ವನಿ ಎತ್ತಿದ್ದಾರೆ. ಕಾವ್ಯವು ನೊಂದವರ ಬಡವರ ಧ್ವನಿಯಾಗಬೇಕು, ಹಾಗಾದಾಗ ಮಾತ್ರ ಅವರ ಸಾರ್ಥಕತೆಗೆ ಅರ್ಥ ಬರುತ್ತದೆ ಎಂಬುದು’ ಎಂದು ಅಭಿಪ್ರಾಯಪಟ್ಟು ಪ್ರಶಂಸಿಸಿದ್ದಾರೆ.
©2025 Book Brahma Private Limited.