ಬಿಸಿಲು ಬಿದ್ದ ರಾತ್ರಿ

Author : ಮಹಾದೇವ ಎಸ್. ಪಾಟೀಲ

Pages 72

₹ 100.00




Year of Publication: 2020
Published by: ಕಂಠಿ ಬಸವ ಪ್ರಕಾಶನ
Address: ಮಲ್ಲಿಕಾರ್ಜುನ ನಿಲಯ, ಭೂಸೂರು(ರಾಂಪೂರು), ಲಿಂಗಸಗೂರು, ರಾಯಚೂರು ಜಿಲ್ಲೆ - 584122
Phone: 7411140065

Synopsys

‘ಬಿಸಿಲು ಬಿದ್ದ ರಾತ್ರಿ’ಯಲ್ಲಿಯ ಗಜಲ್‌ಗಳು ಮೃದು ಮಧುರ ಭಾವಕ್ಕೆ ಸರಿ ಹೊಂದಬಲ್ಲ ಕಾವ್ಯ ಪ್ರಕಾರಗಳು ಇವೆ. ಸಾಮಾನ್ಯವಾಗಿ ಗಜಲ್ ನಲ್ಲಿ ಮಧುಪಾನ, ಗೆಳೆಯ ಅಥವಾ ಗೆಳತಿಯೊಂದಿಗೆ ಸಂವಾದ, ಮಧುವಿನ ಅಂಗಡಿ ಸುಳಿದಾಡುತ್ತವೆ ಆದರೆ ಇಲ್ಲಿಯ ಬಹುತೇಕ ಗಜಲ್‌ಗಳಲ್ಲಿ ಕವಿಯ ಪ್ರತಿಭಟನೆ, ಆತ್ಮನಿವೇದನೆ, ಹತಾಶೆಗಳಿದ್ದು ಓದುಗರ ಅಂತಃಕರಣವನ್ನು ತಟ್ಟುತ್ತವೆ.

‘ಸತ್ತ ದನ-ಕರಗಳ ತೊಗಲನು ತೊಟ್ಟು ನಡೆದಾಡುವವರು ನೀವು ಮಹಾದೇವ ಸತ್ತ ದನಕರ ಹೂತಿಟ್ಟು ಮಣ್ಣು ಮಾಡುವವರು ನಾವು’,ಉಳ್ಳವರು, ಶೋಷಿತರ ನಡುವಿನ ಅಂತರವನ್ನು, ಬದುಕಿನ ದುರ್ಭರ ಸಂಗತಿಗಳನ್ನು ಅಷ್ಟೇ ಸಮರ್ಥವಾಗಿ ಹಿಡಿದಿಡುವ ಗಜಲ್. “ಹನಿ ನೀರಿಗಾಗಿ ಒರತೆ ತೋಡುವ ನನ್ನೆದೆಯ ಬಾವಿಯ ಸುತ್ತಮುತ್ತ ಗುಡುಗು ಮಿಂಚಿನೊಂದಿಗೆ ರಭಸದಿಂದ ಧರೆಗೆ ಮಳೆ ಸುರಿಯಬೇಕಿತ್ತು’ ಬರಗಾಲದ ಸಂದರ್ಭದಲ್ಲಿ ಅನುಭವಿಸುವ ನೋವು, ಯಾತನೆಗಳು ಕವಿಯ ಮನದಲ್ಲಿ ಗಜಲ್‌ನ ಪದವಾಗಿ ಹೊರ ಹೊಮ್ಮಿವೆ.

About the Author

ಮಹಾದೇವ ಎಸ್. ಪಾಟೀಲ
(15 April 1982)

ಕವಿ ಮಹಾದೇವ ಎಸ್. ಪಾಟೀಲ ಅವರು ರಾಯಚೂರು ಜಿಲ್ಲೆಯ ಅಂಗಸೂಗೂರು ತಾಲೂಕಿನ ಭೂಷರು (ರಾಂಪೂರು) ಗ್ರಾಮದಲ್ಲಿ 1982 ಏಪ್ರಿಲ್ 15ರಲ್ಲಿ ಜನಿಸಿದರು. ಓದಿದ್ದು ಬಿ.ಎ. ಪದವಿ. ಸ್ವಗ್ರಾಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ 'ರಾಜಕೀಯದಲ್ಲಿ ರಾವಣರು' ಸಾಮಾಜಿಕ ನಾಟಕವನ್ನು ರಚಿಸಿ, ತಮ್ಮ ಗ್ರಾಮದಲ್ಲಿ ಪ್ರಯೋಗ ಮಾಡುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಕಾಲೇಜು ಹಂತದಿಂದಲೇ ಕಥೆ,ಕವಿತೆ,ಚುಟುಕುನಾಟಕ ಹೀಗೆ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಅವರ ಮೊದಲ ಕೃತಿ - ಗಾಂಧಿ ಬಜಾರ (ಕವನ ಸಂಕಲನ), ಎರಡನೇ ಕೃತಿ ಭೂಷರಾಧೀಶ್ವರ (ಶರಣರ ಜೀವನ ಚರಿತ್ರೆ), ಮೂರನೇ ಕೃತಿ - ಮುತ್ತಿನ ...

READ MORE

Related Books