ನಿರ್ಮಲಾ ಶೆಟ್ಟರ್ ಅವರ ಗಜಲ್ ಗಳ ಸಂಕಲನ- ನಿನ್ನ ಧ್ಯಾನಿಸಿದ ಮೇಲೂ. ಈ ಸಂಕಲನದಲ್ಲಿ 54 ಗಜಲ್ ಗಳಿವೆ. ಖ್ಯಾತ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಕೃತಿಗೆ ಮುನ್ನುಡಿ ಬರೆದು ‘ಬದುಕಿನ ಅನುಭವಗಳು ತಮಗೆ ಕರುಣಿಸಿದ ಸಂಯಮ , ಸಮಾಧಾನಗಳನ್ನು ಹುರಿ ಹಾಕಿ, ಕವಯತ್ರಿ ತಾವೇ ತಯಾರಿಸಿಕೊಂಡ ಸೂತ್ರದಲ್ಲಿ ಪವಣಿಸಿದ ಪದಮುಕುಲಗಳು ಗಜಲ್ ಗಳಾಗಿ ಅರಳಿವೆ. ನಿಶೆಯ ನಶೆಯಲ್ಲಿ ಬೆಳದಿಂಗಳ ಹಾಡುಗಳಿವೆ. ಅವಿಸ್ಮರಣೀಯವಾದ ಅನುತಾಪದ ಅಲೆಗಳು ಗಜಲ್ ಗಳಲ್ಲಿ ತಾಕಲಾಡಿವೆ. ರಸಿಕ ಮನದ ಕಾವ್ಯಾಸ್ವಾದನೆಯ ನಶೆಯೂ ಇದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.