ಮಂಡಲಗಿರಿ ಪ್ರಸನ್ನ ಅವರ ಗಜಲ್ ಸಂಕಲನ ಕೃತಿ ʻನಿದಿರೆ ಇರದ ಇರುಳುʼ. ಪ್ರಸ್ತುತ ಪುಸ್ತಕ 61 ಗಜಲ್ ರಚನೆಗಳ ಗುಚ್ಚವನ್ನು ಒಳಗೊಂಡಿದೆ. ನೆನಪು, ಪ್ರಕೃತಿಯ ಕೆಲವು ವಿಸ್ಮಯಗಳು, ಬೆಳಗಿನ ರಂಗೋಲಿ, ಹೂವುಗಳು, ಕನಸು, ಪ್ರೇಮ, ವಿರಹ, ತ್ಯಾಗ, ವಂಚನೆ, ತೃಪ್ತಿ ಹೀಗೆ ಮನುಷ್ಯ ಮತ್ತು ಪರಿಸರದ ಸಾವಯವ ಸಂಬಂಧವನ್ನು ಸಾರುವ ಅನೇಕ ಗಜಲ್‌ಗಳು ಇಲ್ಲಿವೆ. ನಿದ್ದೆಗೆಡಿಸುವ ಯಾತನೆಗಳು, ಮನುಷ್ಯನ ಒಳ ಸಂಕಟಗಳ ಭಾವನೆಗಳನ್ನು ಗಜಲ್‌ಗಳ ಉದ್ದಕ್ಕೂ ಕಾಣಬಹುದು.
©2025 Book Brahma Private Limited.