ಗಜಲ್ ನ ಕುರಿತು ಸಂಪೂರ್ಣ ತಿಳಿದುಕೊಳ್ಳಲು ಅದರ ಪಾರಿಭಾಷಿಕ ಪದಗಳ ಪರಿಚಯದ ಅಗತ್ಯತೆ ತುಂಬಾ ಇದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಒಂದೆಡೆ ಸಿಗುವ ಅಪರೂಪದ ಪುಸ್ತಕವೆಂದರೆ ಡಾ. ಮಲ್ಲಿನಾಥ ಎಸ್. ತಳವಾರ ಅವರ "ಮಲ್ಲಿಗೆ ಸಿಂಚನ". ಗಜಲ್ ಕಾರರು ಇಲ್ಲಿ ಸುದೀರ್ಘ 20 ಪುಟಗಳಲ್ಲಿ ಪಾರಿಭಾಷಿಕ ಪದಗಳ ಅರ್ಥ, ವಿವರಣೆಯನ್ನು ನಾಡಿನ ಹಿರಿಯ ಗಜಲ್ ಕಾರರ ಗಜಲ್ ಗಳ ಉದಾಹರಣೆಯೊಂದಿಗೆ ನೀಡಿದ್ದಾರೆ. ಕನ್ನಡದ ಮಟ್ಟಿಗೆ ಇದು ಮೊದಲನೆಯ ಪ್ರಯತ್ನ. ಉಳಿದಂತೆ 60 ವೈವಿಧ್ಯಮಯ ವಿಷಯವಸ್ತುವುಳ್ಳ ಗಜಲ್ ಗಳನ್ನು ಈ ಸಂಕಲನವು ಒಳಗೊಂಡಿದೆ. ತರಹೀ ಗಜಲ್, ಜುಲ್ ಕಾಫಿಯಾ ಗಜಲ್, ಬೆಹರ್ ಆಧಾರಿತ ಗಜಲ್, ಸ್ವರ ಕಾಫಿಯಾ ಗಜಲ್, ಸಂಪೂರ್ಣ ಮತ್ಲಾ ಗಜಲ್, ಸೆಹ್ ಗಜಲ್..ಈ ಎಲ್ಲ ಪ್ರಕಾರದ ಗಜಲ್ ಗಳಿವೆ. ಇವರ ಗಜಲ್ ಗಳು ಅಂದರೆ ನಾಲಿಗೆ ಬಯಸುವಂಥ ರುಚಿಕರವಾದ ಭೇಳ್ ಇದ್ದಂತೆ. ಮತ್ತೆ ಮತ್ತೆ ಸವಿಯಬೇಕು ಅನ್ನುವಷ್ಟು ರುಚಿಕರವಾಗಿವೆ.
©2024 Book Brahma Private Limited.