‘ಜೀವ ಭಾವದ ಉಸಿರು’ ಪ್ರಭಾವತಿ ದೇಸಾಯಿ ಮತ್ತು ಮಲ್ಲಿನಾಥ ಶಿ. ದೇಸಾಯಿ ಅವರ ಗಜಲ್‌ಸಂಕಲನವಾಗಿದೆ. ಪ್ರೇಮದ ಅಮಲಿನಲ್ಲಿ ತಾನು ಹುಚ್ಚಿಯಾಗಿದ್ದು ತಿಳಿಯದಷ್ಟು ಪ್ರೇಮದಲ್ಲಿ ತಲ್ಲೀನವಾದ ದೈವಿಕತೆಯ ಪ್ರೇಮ ಇಲ್ಲಿದೆ. ಪ್ರೇಮದ ನಶೆಯಲ್ಲಿ ಚುಚ್ಚುವ ಮುಳ್ಳನ್ನು ಕೆಂಗುಲಾಬಿ ಎಂದು ಮುಡಿಗೇರಿಸಿಕೊಂಡು ನೋವನುಭವಿಸಿದ್ದೂ ಗೊತ್ತಾಗಲಿಲ್ಲ. ಅದೆಂತಹ ಪ್ರೇಮ ಇದು ಎಂದು ಬೆರಳು ಕಚ್ಚುವಷ್ಟರಲ್ಲಿ ಪ್ರೇಮ ಸಾಗರದಲಿ ನೀರು ಚಿಮುಕಿಸಿದ್ದು ತಿಳಿಯಲಿಲ್ಲ ಗುಲಾಬಿ ಮುಳ್ಳನು ಒಲವಿಂದ ಚುಂಬಿಸಿದ್ದು ತಿಳಿಯಲಿಲ್ಲ (ಮಲ್ಲಿನಾಥ ತಳವಾರ) ಎಂದು ಮತ್ತಿಷ್ಟು ಅಚ್ಚರಿಗೆ ಜುಗರ್ಲ ದೂಡುತ್ತದೆ. ಪ್ರೇಮ ಸಾಗರಕ್ಕೆ ನೀರು ಚಿಮುಕಿಸಿದ್ದು ಅರಿವಾಗದಷ್ಟು ಪ್ರೇಮ ತಲ್ಲೀನ. ಹೂವು ಎಂದು ತಿಳಿದು ಗುಲಾಬಿಯ ಮುಳ್ಳನ್ನು ಚುಂಬಿಸಿ ತುಟಿ ಗಾಯ ಮಾಡಿಕೊಂಡಿದ್ದೂ ತಿಳಿಯದಷ್ಟು ಪ್ರೇಮ ಆವರಿಸಿಕೊಂಡಿದೆ ಎಂದಾಗ ಮನಸ್ಸು ಒಂದು ಕ್ಷಣ ಝಲ್ ಎನ್ನುತ್ತದೆ. ಗಜಲ್ ವಿಶೇಷತೆ ಇರುವುದೇ ಇಂತಹ ವಿಶೇಷತೆಗಳಲ್ಲಿ. ಎಲ್ಲೋ ದೂರದಲ್ಲಿ ಕುಳಿತು ಬರೆಯುವ ಗಜಲ್‌ಕಾರರು ಅಂದುಕೊಳ್ಳದೆಯೇ ಒಂದೇ ರೀತಿ ಬರೆಯುವುದೇ ಗಜಲ್‌ನೊಳಗೆ ಹಾಗೂ ಜುಗಲ್‌ನೊಳಗೆ ಸಾಧಿಸಿರುವ ತಾದ್ಯಾತ್ಮವನ್ನು ಈ ಕೃತಿ ತಿಳಿಸುತ್ತದೆ.
©2024 Book Brahma Private Limited.