ಖಾಲಿ ಕೋಣೆಯ ಹಾಡು-ಈ ಸಂಕಲನದಲ್ಲಿ ಒಟ್ಟು 40 ಗಜಲ್‌ಗಳಿದ್ದು ಆಶಯವನ್ನು ಬಿಂಬಿಸುವ ಲಕ್ಷ್ಮಣ ಬದಾಮಿ ಅವರ ಚಿತ್ರಗಳು ಇಲ್ಲಿವೆ. ಸಂಕಲನಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ರಾಗಂ ಅವರ ಮುನ್ನುಡಿ ಇದ್ದು, ಪ್ರೊ. ಚಂಪಾ ಅವರು ಬೆನ್ನುಡಿ ಬರೆದಿದ್ದಾರೆ. ಹೆಚ್ಚಾಗಿ ಪ್ರೀತಿಯನ್ನೇ ವಿಷಯವನ್ನಾಗಿಸಿಕೊಂಡು ಬರುವ ಗಜಲ್ ಗಳ ನಡುವೆ, ತಾಯಿ ಮತ್ತು ಸಮಾಜದ ಬಗ್ಗೆಯೂ ಮಿಡಿದ ಗಜಲ್ ಗಳಿವೆ. ಹೆಣ್ಣಿನ ಶೋಷಣೆ, ದೌರ್ಜನ್ಯ ಹೀಗೆ ಸಮಾಜದ ಹಲವು ಅಂಧಕಾರಗಳ ವಿರುದ್ಧ ಧ್ವನಿ ಎತ್ತಿದ್ದಾರೆ ಕವಿ.
©2025 Book Brahma Private Limited.