ಅಮೀರುದ್ದೀನ್ ಖಾಜಿ ಯವರ ಭಾವಯಾನ ಗಜಲ್ ಸಂಕಲನಕ್ಕೆ ಹಿರಿಯ ಸಾಹಿತಿಗಳಾದ ಶ್ರೀ. ಜಂಬುನಾಥ ಕಂಚ್ಯಾಣಿ ಅವರು ಅರ್ಥ ಪೂರ್ಣವಾದ “ಭಾವಯಾನಕ್ಕೊಂದು ನುಡಿ ಬಾನ“ವನ್ನು ಬರೆದು ಸಂಕಲನದ ಮೌಲ್ಯ ಹೆಚ್ಚಿಸಿದ್ದಾರೆ. ಸಂಕಲನದ ಮುಖ ಪುಟ ಚಿತ್ರವು ಆಕರ್ಷಣೆಯಾಗಿದ್ದು ಒಳ ಚಿತ್ರಗಳು ಗಜಲ್ ಗಳ ಭಾವಕ್ಕೆ ಹೊಂದುವಂತ್ತಿದ್ದು ಸಂಕಲನದ ಮೌಲ್ಯ ಹೆಚ್ಚಿಸಿವೆ. ಡಾ.ಅಮೀರುದ್ದೀನ್ ಖಾಜಿ ಅವರು ಗಜಲ್ ದ ಮೂಲ ದ್ರವ್ಯವಾದ ಪ್ರೀತಿ, ಪ್ರೇಮ, ವಿರಹ, ಕಾಯುವಿಕೆ,ಅನುಸಂದಾನ ,ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವ ಗಜಲ್ ಗಳನ್ನು ರಚಿಸಿದ್ದಾರೆ ಭಾವತೀವ್ರತೆ ಮತ್ತು ರೂಪಕ ಪ್ರತಿಮೆಗಳು ಓದುಗರನ್ನು ಮಾತಾಡಿಸುತ್ತವೆ.
©2025 Book Brahma Private Limited.