ಸಾಹಿತಿ ಅನಸೂಯ ಜಹಗೀರದಾರ ಅವರ ಗಜ಼ಲ್ ಸಂಗ್ರಹ -ಆತ್ಮಾನುಸಂಧಾನ. ಸಾಹಿತಿ ಅಲ್ಲಾಗಿರಿರಾಜ ಕನಕಗಿರಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಸಾಹಿತಿ ಡಾ.ಸರಜೂ ಕಾಟ್ಕರ್ ಬೆನ್ನುಡಿ ಬರೆದು ‘ಕಾವ್ಯದ ಅತ್ಯಂತ ಸೂಕ್ಷ್ಮ ಮತ್ತು ಕೋಮಲ ಪ್ರಕಾರವೆಂದರೆ ಗಜ಼ಲ್. ಈ ಪ್ರಕಾರ ಪಾರಿಜಾತದ ಹೂವಿಗಿಂತಲೂ ಮೃದು ಮತ್ತು ಸಂಪಿಗೆಯಷ್ಟೇ ಸುಗಂಧಭರಿತವಾದುದು. ಈ ಸಂಪಿಗೆಯ ಘಮಲಿಗೆ ಮಲ್ಲಿಗೆಯ ಸುವಾಸನೆ ಬೆರೆಸಿ, ಅದನ್ನು ಮತ್ತಷ್ಟು ಸುಗಂಧಭರಿತವಾಗಿಸಿದವರು ಅನಸೂಯ ಜಹಗೀರದಾರ. ಅನಸೂಯ ಅವರು ತಮ್ಮ ಸುತ್ತಲಿನ ಪರಿಸರವನ್ನು ಎಷ್ಟೊಂದು ಸೂಕ್ಷ್ಮವಾಗಿ ಅವಲೋಕಿಸಿ ಗ್ರಹಿಸುತ್ತಾರೆಂದರೆ, ಅಮ್ರಪಾಲಿ, ಗಾಂಧೀಜಿ, ವ್ಯಕ್ತಿತ್ವಗಳಿಗೂ ಗಜ಼ಲಿನ ರೂಪ ಕೊಟ್ಟಿದ್ದಾರೆ. ಅನಸೂಯ ಅವರ ಸಿದ್ದಹಸ್ತದ ಲೇಖನಿಯಲ್ಲಿ ಹೂವಿನಂತೆಯೇ ಗಜ಼ಲುಗಳು ಸಹಜವಾಗಿ ಅರಳಿವೆ. ಇಲ್ಲಿಯ ಗಜ಼ಲುಗಳು ಉರ್ದು ಅಥವಾ ಹಿಂದಿ ಭಾಷೆಯ ಗಜ಼ಲುಗಳಷ್ಟೇ ಶ್ರೇಷ್ಠವಾಗಿವೆ. ಬಹು ಸುಂದರವಾಗಿವೆ. ಅತ್ಮಾನುಸಂಧಾನ ಗಜ಼ಲುಗಳು ಓದುಗರನ್ನು ಸೆರೆಹಿಡಿದು, ಮೋಡಿಗೊಳಿಸುತ್ತವೆ. ಅನಸೂಯ ಜಹಗೀರದಾರ ಅವರಿಂದ ಮತ್ತಷ್ಟು ಸಾಹಿತ್ತಿಕ ಕೃತಿಗಳು ಅರಳಲಿ. ಲೋಕಾರ್ಪಣೆಗೊಳ್ಳಲಿ’ ಎಂಬ ಪ್ರಶಂಸಿಸಿದ್ದಾರೆ.
©2024 Book Brahma Private Limited.