ಕವಿ ಸಿದ್ಧರಾಮ ಹೊನ್ಕಲ್ ಅವರು ಬರೆದ ಗಜಲ್ ಗಳ ಸಂಕಲನ-ನಿನ್ನ ಪ್ರೇಮವಿಲ್ಲದೇ ಸಾಕಿ. ಉರ್ದು ’ಸಾಹಿತ್ಯದಲ್ಲಿ ವಿಶೆಷವಾಗಿ ಗಜಲ್ ಗಳಲ್ಲಿ ಬರುವ ‘ಸಾಕಿ’ ಎಂಬ ಪದವು ನಾಮಸೂಚಕವೂ, ಕಾರ್ಯ ಸೂಚಕವೂ ಆಗಿದ್ದು, ಮದ್ಯವನ್ನು ಗಿರಾಕಿಗಳಿಗೆ ಪೂರೈಸುವ ಕೆಲಸ ಮಾಡುವಾಕೆ. ಹೀಗಾಗಿ, ಈ ‘ಸಾಕಿ’ಯ ಕಡೆಗೆ ಎಲ್ಲ ಮದ್ಯಪ್ರಿಯರ ಗಮನ ಕೇಂದ್ರೀಕೃತವಾಗಿರುತ್ತದೆ. ‘ಸಾಕಿ’ಯನ್ನು ಕೇಂದ್ರೀಕರಿಸಿ ಗಜಲ್ ಗಳನ್ನು ಬರೆಯುವ ಹಾಗೆ ಪ್ರಿಯತಮೆ ಇಲ್ಲದೇ ಬದುಕು ಸಾಗದು ಎಂಬ ಭಾವತೀವ್ರತೆಯಲ್ಲಿ ಕವಿಯು ಗಜಲ್ ಗಳನ್ನು ರಚಿಸಿದ್ದಾರೆ.
©2024 Book Brahma Private Limited.