ಬಿಂಕದ ಸಿಂಗಾರಿ ಶೋಭಾ ಹರಿಪ್ರಸಾದ್ ಅವರ ಗಝಲ್‌ಗಳ ಝೇಂಕಾರವಾಗಿದೆ. ಗಝಲ್ ನ ವೈಶಿಷ್ಟ್ಯ ನೋಡಿ ಗದ್ದೆಯಲ್ಲಿ ನಟ್ಟಿ ಮಾಡುವ ಸಮಯದಲ್ಲಿ ಹುಡುಗನನ್ನು ಸೆಳೆದ ಹುಡುಗಿಗೆ ಕಾವ್ಯಮಯವಾಗಿ ಹೇಳುವ ರೀತಿ ನಟ್ಟಿ ಗದ್ದೆಯ ನಡುವೆ ವಾರೆಗಣ್ಣಲಿ ನೋಡಿ ಮನಸೆಳೆವ ವೈಯಾರಿಯೇ ಬೊಟ್ಟನೊಂದನು ಇಟ್ಟು ಬಿಟ್ಟಿ ತೆಗೆಯುವ ಬಯಕೆ ಒಪ್ಪನ್ನ ಸಿಂಗಾರಿಯೇ ನಟ್ಟಿ ಮಾಡುವಾಗಲೂ ವಾರೆಗಣ್ಣಲಿ ನನ್ನ ಕದ್ದು ನೋಡುವ ಮನಸೆಳೆದ ಚೆಲುವೆಯೇ, ನಿನ್ನ ಚಂದದ ಮೊಗದಲ್ಲಿ ಬೊಟ್ಟನೊಂದು ಇಟ್ಟು ದೃಷ್ಟಿ ತೆಗೆಯುವೆ. ಒಪ್ಪಿಕೋ ರಸಿಕತನದಲ್ಲಿ ಹೇಳುವ ಅದ್ಭುತ ಗಝಲ್ ಇದಾಗಿದೆ. ಇಂತಹ ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಇರುವ ಗಝಲ್ ಗಳು ಓದುಗರನ್ನು ಸೆಳೆಯುತ್ತವೆ. ಇನ್ನು ಇವರು ಬರೆದ ಪೂರ್ಣ ಮತ್ತಾ ಗಝಲ್ ನೋಡುವುದಾದರೆ ಬರೆದಿಟ್ಟ ಚಿತ್ತಾರ ಬಣ್ಣವನ್ನು ಕಳಕೊಂಡು ನರಳಿರುವ ಸದ್ದು ಸುತ್ತ ಅರಳಿದ್ದ ನಂಬಿಕೆಯು ಬುಡ ಮೇಲು ಆಗುತ್ತ ಕೆರಳಿರುವ ಸದ್ದು ಸುತ್ತ ಬಣ್ಣದ ಚಿತ್ರವೊಂದು ಕಾಲ ಸರಿದಂತೆ ಬಳಿದ ಬಣ್ಣವು ಮಾಸಲು ಆಗುವ ನೋವಿನ ನರಳಿಕೆಯ ಸದ್ದು ಸುತ್ತಮುತ್ತಲು ಕೇಳುತ್ತಿದೆ. ಇದು ಕಾಲ ಸರಿದಂತೆ ಮನುಷ್ಯನ ಮೇಲಾಗುವ ಪರಿಣಾಮಕ್ಕೂ ಅನ್ವಯಿಸಬಹುದು. ಹಾಗೆಯೇ. ಅರಳಿರುವ ನಂಬಿಕೆಯು ಬುಡ ಮೇಲು ಆಗುತ್ತ ಕೆರಳಿರುವ ಸದ್ದು ಸುತ್ತ ಬಲವಾಗಿ ಚಿಗುರಿದ ನಂಬಿಕೆ ಕುಸಿದಾಗ ಅಸಹನೆಯಿಂದ ಕೆರಳುವ ಸದ್ದು ಸುತ್ತಲ್ಲವೂ ಕೇಳಿಸುತ್ತದೆ ಎಂದು ತುಂಬಾ ಮಾರ್ಮಿಕವಾಗಿ ಹೇಳಿದ್ದಾರೆ ಎಂದು ಮಧುಕೇಶವ ಭಾಗ್ವತ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.