ಗರೀಬ್ ಗಜಲ್ ರಮೇಶ್ ಗಬ್ಬೂರು ಅವರು ರಚಿಸಿರುವ ಗಜಲ್‌ಗಳ ಸಂಕಲನವಾಗಿದೆ. ಈ ಸಂಕಲನದ ಕುರಿತು ಬರೆಯುತ್ತಾ ಅಲ್ಲಾಗಿರಿರಾಜ್ ಅವರು ‘ರಮೇಶ ಗಬ್ಬೂರು ತನ್ನೊಡಲಾಳದ ನೋವು, ಆತಂಕ, ಅವಮಾನಿತ ಬದುಕಿನ ಪ್ರಶ್ನೆಗಳನ್ನೆಲ್ಲಾ ಈ ಜಗನದ ಮುಂದೆ ಗಜಲ್ ಕಾವ್ಯರಾಣಿಯ ಗೆಜ್ಜೆ ರೂಪವಾಗಿ, ಸವಾಲಾಗಿ ಉತ್ತರ ಹುಡುಕುವ ತುಡಿತದಲ್ಲಿದ್ದಾನೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ , ಇವರ ಗಜಲ್ ಒಳಗಿನ ಮೂಲ ಅಭಿವ್ಯಕ್ತಿ ರೂಪವೇ ಬದುಕಿನ ಹಕ್ಕು. ಜಾತಿ ಮತ ಅಟ್ಟಹಾಸದ ನಡುವೆ ಯಾರದೋ ಕೈಯಲ್ಲಿ ಅಸ್ತ್ರವಾಗಿ ಉಳಿದು ಶ್ರಮ ಸಂಸ್ಕೃತಿಯ ಸಮುದಾಯವು ನಲಿವು ಕಸಿದುಕೊಂಡಿದೆ ಎನ್ನುವುದು ಗರೀಬ್ ಗಜಲ್ ಸಂಕಲನದ ಮೂಲ ಆಶಯವಾಗಿದೆ ಎನ್ನುತ್ತಾರೆ.
©2024 Book Brahma Private Limited.