ಲೇಖಕ ರಾಮು ಎನ್ ರಾಠೋಡ್ ಮಸ್ಕಿ ಅವರ ‘ಹೊಂಗೆ ನೆರಳು’ ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನವಾಗಿದೆ. ಈ ಸಂಕಲನದಲ್ಲಿ 74 ಗಜಲ್ ಗಳಿವೆ. ರಾಯಚೂರಿನ ಹಿರಿಯ ಸಾಹಿತಿಗಳು ಮಂಡಲಗಿರಿ ಪ್ರಸನ್ನ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ‘ ಇಲ್ಲಿ ಬರೆಯುತ್ತಿರುವ ಬಹುತೇಕರು ಹೊಸಬರು, ಪ್ರೀತಿ, ಮಾಲೆ, ಸಾಹಿ ಪ್ರೇಮ, ಪ್ರಣಯವನ್ನೂ ಬಿಟ್ಟು ವರ್ತಮಾನದ ತಲ್ಲಣಗಳಿಗೆ ತಮ್ಮ ಗಜಲ್ ರಚನೆ ಮಾಡುತ್ತಿರುವುದು ಇಲ್ಲಿ ಕಂಡುಬಂದು ಹೆಚ್ಚಿನ ಗಜಲ್‌ಗಳು ಗಂಭೀರ ಓದುವಿಕೆಯ ಇಲ್ಲದ ಕಾರಣಕ್ಕೆ ದುರ್ಬಲವಾಗಿವೆ. ಗಜಲ್ ಮೋಹಕ ಕಾವ್ಯ ಪ್ರಕಾರವಾದರೂ ಕವಿಯನ್ನು ಕಾಡಿಸಿ, ಪೀಡಿಸಿ, ಬರೆಯಲು ಹಚ್ಚುವ ಮನದ ತಳಮಳದ ಕಾವ್ಯ. ಹಾಗಾಗಿ ಗಜಲ್ ರಚನೆಯ ಸಂದರ್ಭದಲ್ಲಿ ಕವಿ ವಸ್ತು, ವಿಷಯದ ಆಯ್ಕೆಯಲ್ಲಿ ತುಂಬಾ ಹುಷಾರಾಗಿರಬೇಕು. ಉತ್ತಮ ಕಾಫಿಯಾ ಮತ್ತು ರದಿಫ್‌ಗಳ ಆಯ್ಕೆ ಜೊತೆಗೆ ರೂಪಕಗಳ ಬಳಕೆ ಮತ್ತು ಕಾವ್ಯದ ಚಲುವಿಕೆ ಬೇಕು, ಗಜಲ್ ಕೇವಲ ಛಂದೋಲಕ್ಷಣಗಳನ್ನಿಟ್ಟುಕೊಂಡು ವಾಚ್ಯವಾಗಿ ಬರುತ್ತಿರುವ ಗಜಲ್‌ಗಳಾಗದ ಕಾವ್ಯದ ಹೂರಣದಿಂದ ಮೈದುಂಬಿಕೊಂಡಿರಬೇಕು. ಕಾವ್ಯಗುಣದಿಂದ ವಂಚಿತವಾಗದಂತೆ ಎಚ್ಚರ ವಹಿಸುವುದು ಗಜಲ್ ಕವಿಯ ಆಶಯವಾಗಬೇಕು. ಗಜಲ್‌ಗೆ ಭಾವಪ್ರಪಂಚ ಎಷ್ಟು ಮುಖ್ಯವೋ ಅಷ್ಟೇ ಭಾವತೀವ್ರತೆ ಮತ್ತು ಕಾವ್ಯಾಂಶಗಳ ತುಡಿತವೂ ಬೇಕು. ಆಗ ಗಜಲ್ ರುಚಿ ನೀಡಿತು. ಇರದಿದ್ದಲ್ಲಿ ಗಜಲ್‌ನ ಸೌಂದರ್ಯ ಕಾಣಲು ಸಾಧ್ಯತೆ. “ನೋವು ಸಂಕಟವೆಂದಾದರೆ ಪರಿಹಾರಕ್ಕೆ ಗಜಲ್ ಬರೆದುಬಿಡು ಸುಖ ಸಂತಸಗಳೆಂದಾದರೆ ಖುಷಿಪಡಲಿಕ್ಕೆ ಗಜಲ್ ಬರೆದುಬಿಡು”..ಎಂಬುದಾಗಿ ಮುನ್ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.