ಮಕ್ಕಳ ಸಾಹಿತಿ ಚಂದ್ರಕಾಂತ ಕರದಳೆಯವರ ’ಚಂದಮಾಮ ಒಬ್ಬನೆ ಇದ್ದಿಯಾ ?’ ಸಂಕಲನದಲ್ಲಿ 51 ಮಕ್ಕಳ ಕವಿತೆಗಳಿವೆ. ಈ ರಚನೆಗಳು ಲವಲವಿಕೆಯಿಂದ ಕೂಡಿದ್ದು, ಕೂತೂಹಲವನ್ನು ಮೂಡಿಸುತ್ತವೆ. ಮಕ್ಕಳಿಗೆ ಆಲೋಚನೆ ಮಾಡಲು ಹಚ್ಚುತ್ತವೆ. ಹತ್ತಾರು ಪ್ರಶ್ನೆಗಳನ್ನು ಕೇಳುವುದರ ಮೂಲಕ ಪರಿಸರ ಪ್ರಜ್ಞೆಯನ್ನು, ಬದುಕಿನ ಅರಿವನ್ನು ಜಾಗೃತಗೊಳಿಸುತ್ತವೆ. ಇಲ್ಲಿ ನಾಲ್ಕು ಸಾಲಿನ ಪದ್ಯಗಳೇ ಜಾಸ್ತಿ. . ಚುಕ್ಕಿ ಚಂದಿರ, ಗುಬ್ಬಚ್ಚಿ, ಒಂಟೆ, ಮಳೆ, ಮೋಡ, ಎಲ್ಲವೂ ಪದ್ಯಗಳಲ್ಲಿವೆ. ಸಿದ್ದಾರ್ಥನ ಕರುಣೆ, ಹೊಳೆ ಹಾಡು, ಬೇಸಿಗೆ, ಜೋಗದ ಹವಾ ಹೀಗೆ ವೈವಿಧ್ಯಮಯ ವಿಷಯಗಳು ಕೂಡ ಜಾಗ ಪಡೆದಿವೆ.
©2024 Book Brahma Private Limited.