ಇದರಲ್ಲಿ ಕುವೆಂಪು, ದ.ರಾ. ಬೇಂದ್ರೆ. ಚೆನ್ನವೀರ ಕಣವಿ, ದೊಡ್ಡರಂಗೇಗೌಡ, ಬರಗೂರು ರಾಮಚಂದ್ರಪ್ಪ, ಸುಮತೀಂದ್ರ ನಾಡಿಗ, ನಿಸಾರ್ ಅಹ್ಮದ್, ಸಿದ್ದಲಿಂಗಯ್ಯ, ಚಂದ್ರಶೇಖರ ಕಂಬಾರ ಮೊದಲಾದ ಹಿರಿಯ ಸಾಹಿತಿಗಳ ಮಕ್ಕಳ ಸಾಹಿತ್ಯದ ಸೊಗಡಿದೆ. ಕನ್ನಡದ ಬಹುತೇಕ ಮುಖ್ಯ ಕವಿಗಳೆಲ್ಲರ ಮಕ್ಕಳ ಸಾಹಿತ್ಯ ಒಂದೆಡೆ ದೊರೆಯಬೇಕೆಂಬ ಸದಾಶಯದಿಂದ ಹಿರಿಯ ವಿಧ್ವಾಂಸರಾದ ಪ್ರೊ. ಸಿ.ವಿ. ಕೆರಿಮನಿ ಹಾಗೂ ಹಿರಿಯ ಮಕ್ಕಳ ಕವಿ ಎ.ಕೆ. ರಾಮೇಶ್ವರರು ಈ ಕವನ ಸಂಕಲನವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾರೆ. ಇಲ್ಲಿನ ಕವನ ಪದ್ಯಗಳನ್ನು 5 ರಿಂದ 7 ವರ್ಷದ ಮಕ್ಕಳಿಗೆ ಮೊದಲ ಎಸಳಿನಲ್ಲಿ, 8-10 ವಯೋಮಾನದ ಮಕ್ಕಳಿಗೆ ಎರಡನೇ ಎಸಳಿನಲ್ಲಿ ಹಾಗೂ 10-14 ವಯೋಮಾನದ ಮಕ್ಕಳಿಗೆ ಮೂರನೇ ಎಸಳಿನಲ್ಲಿ ವಿಂಗಡಿಸಿ ನೀಡಿದ್ದಾರೆ.
©2025 Book Brahma Private Limited.