ಬಾರೆಲೆ ಹಕ್ಕಿ ಬಣ್ಣದ ಹಕ್ಕಿ ಬಾರೆಲೆ ಹಕ್ಕಿ ಬಣ್ಣದ ಹಕ್ಕಿ ತಿನ್ನುವಿಯಂತೆ ಕಾಳನು ಹೆಕ್ಕಿ ರೆಕ್ಕೆಯ ಬಿಚ್ಚಿ ಹಾರುತ ಸಾಗಿ ಆಗುವಿಯಂತೆ ಬಾನಿನ ಚುಕ್ಕಿ ಅಂದದ ಕೊಕ್ಕು ಚಂದದ ಜುಟ್ಟು ಪುಟಾಣಿ ಕಣ್ಣು ನೆತ್ತಿಲಿ ಬೊಟ್ಟು ಸೊಟ್ಟಗೆ ನಿಂತಿಹ ಕಡ್ಡಿಯ ಕಾಲು ನಾನೂ ಹತ್ತಿರ ಬರುವೆನು ತಾಳು ನಿನ್ನಯ ಬಣ್ಣ ಎಂತಹ ಚೆನ್ನ ಕಣ್ಣಿಗೆ ಹಬ್ಬವು ಅನುದಿನವು ನುಣ್ಣನೆ ಪುಕ್ಕ ರೆಕ್ಕೆಯ ಪಕ್ಕ ಮೆತ್ತನೆ ಹತ್ತಿಯ ಅನುಭವವು ಕಣ್ಣನು ಮಿಟುಕಿಸಿ ಕೊರಳನು ಕೊಂಕಿಸಿ ಹಾರುವೆನೆನ್ನುವ ಸೂಚನೆ ಕೊಟ್ಟು ಕಡ್ಡಿಯ ಕಾಲನು ಹಿಂದಕೆ ಮಡಚಿ ಚಿಮ್ಮುವೆ ಗಗನಕೆ ಮನಸನ್ನಿಟ್ಟು ಪುರ್ರನೆ ಹಾರಿ ಸರ್ರನೆ ಜಾರಿ ಆಗಸದಲ್ಲಿ ಮಾಡುವೆ ದಾರಿ ಹಾರುತ ಏರುತ ಗಗನಕೆ ತೂರಿ ನಿಲ್ಲುವೆ ಎಲ್ಲೋ ಗಮ್ಯವ ಸೇರಿ ಬಾರೆಲೆ ಹಕ್ಕಿ ಬಣ್ಣದ ಹಕ್ಕಿ ಬಾನನು ಸೇರಿದ ಸುಂದರ ಚುಕ್ಕಿ ಕಾದಿರುವೆನು ನಾ ನಿನಗಾಗಿ ಬರುವೆಯಾ ನೀನು ನನಗಾಗಿ? (ಕೃತಿಯ ಭಾಗದಿಂದ)
©2024 Book Brahma Private Limited.