‘ಬಾರೋ ಬಾರೋ ಮಳೆರಾಯ’ ಕೃತಿಯು ಎಚ್.ಎಸ್. ವೆಂಕಟೇಶಮೂರ್ತಿ ಅವರ ಮಕ್ಕಳ ಪದ್ಯಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕವಿ ಜಿ.ಎಸ್.ಶಿವರುದ್ರಪ್ಪ, ‘ಕನ್ನಡ ನವೋದಯ ಸಾಹಿತ್ಯ ಸಂದರ್ಭದ ನಂತರ, ಸೃಜನಶೀಲರಾದ ಕನ್ನಡ ಕವಿಗಳ ನಿರ್ಲಕ್ಷ್ಯಕ್ಕೆ ಗುರಿಯಾದ ಪ್ರಕಾರವೆಂದರೆ ಮಕ್ಕಳ ಸಾಹಿತ್ಯ, ಪಂಜೆ, ಹೊಯಿಸಳ, ಕಾರಂತ, ಎಲ್. ಗುಂಡಪ್ಪ, ಕುವೆಂಪು, ರಾಜರತ್ನಂ ಇಂಥವರಿಂದ ರಚಿತವಾದ, ಲವಲವಿಕೆಯ ಮಕ್ಕಳ ಕವಿತೆಗಳ ನಂತರ, ಮುಂದಿನದು ಒಂದು ಬಗೆಯ ಬೀಳುಗಾಲವೆಂದೇ ಹೇಳಬೇಕು. ಕಥನದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ಪಳಗಿಸಿಕೊಂಡ ವೆಂಕಟೇಶಮೂರ್ತಿಯವರ ಪ್ರವೇಶದಿಂದಾಗಿ ಮಕ್ಕಳ ಕವಿತೆಗೊಂದು ವಸಂತ ಸ್ಪರ್ಶವೇ ದೊರಕಿತು ಎಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.