‘ಹಸಿರಿನ ಕಟ್ಟು’ ತಮ್ಮಣ್ಣ ಬೀಗಾರರ ಮಕ್ಕಳ ಕವನ ಸಂಕಲನವಾಗಿದೆ. ಇದಕ್ಕೆ ಭಾಗೀರಥಿ ಹೆಗಡೆ ಅವರ ಬೆನ್ನುಡಿ ಬರಹವಿದೆ; ತಮ್ಮಣ್ಣ ಬೀಗಾರರ ಬರಹದ ಮೂಲ ಪ್ರೇರಣೆ ನಿಸರ್ಗ, ಮಲೆನಾಡ ಪರಿಸರ. ಇದು ಬೀಗಾರರ ಪದ್ಯಗಳಲ್ಲೂ ಬಹು ಮುಖ್ಯ ಪಾತ್ರ ವಹಿಸಿವೆ. ಜೊತೆಗೆ ಸರಳ ಭಾಷೆ, ಸೂಕ್ಷ್ಮ ದೃಷ್ಟಿ, ಮಗು ಮನಸ್ಸಿನ ಅದಮ್ಯ ಕುತೂಹಲಗಳು ಇಲ್ಲಿ ಮಕ್ಕಳಂತೆಯೇ ಜಿಗಿಜಿಗಿದಾಡುತ್ತ ಮಾತಾಡುತ್ತವೆ. ಮಕ್ಕಳ ಅನನ್ಯ ಕಲ್ಪಕತೆ ಬೀಗಾರರ ಪದ್ಯಗಳಲ್ಲಿ ಆತ್ಯಂತಿಕವಾಗಿ ಅಭಿವ್ಯಕ್ತಿಗೊಂಡಿದೆ. ಪ್ರಾಸ ಲಯಗಳೊಂದಿಗೆ ಕೆಲವು ಆಡು ಮಾತಿನ ಪದ್ಯಗಳೂ ಇವೆ. ಜೊತೆಗೆ ಮುಕ್ತ ಛಂದಸ್ಸಿನ ಪದ್ಯಗಳನ್ನೂ ಮಕ್ಕಳಿಗಾಗಿ ಬೀಗಾರರು ಬರೆದಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ತಮ್ಮಣ್ಣ ಬೀಗಾರರ ಪದ್ಯಗಳು ಕನ್ನಡದ ಮಕ್ಕಳಿಗೆ ದೊರೆತ ಅಪೂರ್ವ ಕಾಣಿಕೆ ಎಂದರೆ ಉತ್ಪ್ರೇಕ್ಷೆಯೇನೂ ಆಗುವುದಿಲ್ಲ.
©2025 Book Brahma Private Limited.