‘ಅಮ್ಮ ಮತ್ತು ಮೇಡಂ’ ಜೀನಹಳ್ಳಿ ಸಿದ್ಧಲಿಂಗಯ್ಯ ಅವರು ರಚಿಸಿರುವ ಮಕ್ಕಳ ಕವನಗಳ ಸಂಕಲನ. ಲೇಖಕ ತಮ್ಮಣ್ಣ ಬೀಗಾರ ಅವರು ಬೆನ್ನುಡಿ ಬರೆದು ‘ಮಕ್ಕಳ ಜಗತ್ತಿನಲ್ಲಿ ಓಡಾಡುತ್ತ ಮಕ್ಕಳ ಮುಗ್ಧತೆ ಹಾಗೂ ಚೈತನ್ಯ ತಮ್ಮದಾಗಿಸಿಕೊಂಡು ಒಂದು ರೀತಿ ಧ್ಯಾನದಂತೆ ಶ್ರದ್ಧೆಯಿಂದ ತೊಡಗಿಸಿಕೊಳ್ಳುವಿಕೆ ಮಕ್ಕಳ ಸಾಹಿತ್ಯದ ಯಶಸ್ವೀ ಬರವಣಿಗೆಗೆ ಪೂರಕವಾಗುತ್ತದೆ. ಮಕ್ಕಳ ಕವಿತೆ ಇರಲಿ, ಕಥೆ, ಕಾದಂಬರಿಗಳಿರಲಿ; ಅದು ಮಕ್ಕಳ ಜಗತ್ತಿನ ಪ್ರವೇಶ ಹಾಗೂ ಮಗುತನದ ಅನುಭವ ಅನುಭವಿಸಿ ಬರೆಯುವ ಪ್ರೀತಿಯನ್ನು ಬೇಡುತ್ತದೆ. ಅಂತಹ ತೊಡಗಿಸಿಕೊಳ್ಳುವಿಕೆಯಲ್ಲಿ ನಿರಂತರವಾಗಿ ನಿರತರಾಗಿರುವ ಜೀನಹಳ್ಳಿ ಸಿದ್ಧಲಿಂಗಪ್ಪನವರು ಅಮ್ಮ ಮತ್ತು ಮೇಡಂ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಮಗು ತನ್ನ ಅಮ್ಮ ಮತ್ತು ಮೇಡಂರನ್ನು ಎಷ್ಟೆಲ್ಲಾ ಆಪ್ತವಾಗಿ ಕಾಣುತ್ತದೆ ಮತ್ತು ಅಪ್ಪ, ಅಜ್ಜ, ಅಜ್ಜಿ ಎಲ್ಲ ಪ್ರೀತಿಯ ಬೊಗಸೆಯೊಂದಿಗೆ ಹೇಗೆ ಹತ್ತಿರವಾಗುತ್ತಾರೆ ಎನ್ನುವುದನ್ನು ಮಕ್ಕಳ ಕಣ್ಣಿನಿಂದಲೇ ನೋಡಿ ಬರೆದಂತೆ ಇಲ್ಲಿನ ಪದ್ಯಗಳಿವೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.