‘ಆನೆ ಬಂತು ಆನೆ’ ಕೃತಿಯು ಆರ್.ಪಿ. ಹೆಗಡೆ ಅವರ ಮಕ್ಕಳ ಸಚಿತ್ರ ಕವನಸಂಕಲನವಾಗಿದೆ. ಮಕ್ಕಳ ಮನಸ್ಸಿಗೆ ಹಿತವಾಗುವ ಲಯಬದ್ಧವಾದ ಪ್ರಾಸಬದ್ಧವಾದ ಆಕರ್ಷಕ ಕವನಗಳು ಇಲ್ಲಿವೆ. ಇಲ್ಲಿ ಕೆಲವಂತೂ ರಾಜರತ್ನಂ ಅವರ ಕವನಗಳನ್ನು ನೆನಪಿಸುವಂತಿವೆ. ಪ್ರಕೃತಿ, ಪ್ರಾಣಿಗೆ ಸಂಬಂಧಿಸಿದ ಹಾಡುಗಳೇ ಹೆಚ್ಚಿಗೆ ಇರುವುದರಿಂದ ಇವೆಲ್ಲ ಮಕ್ಕಳಿಗೆ ಪ್ರಿಯವಾಗಬಹುದಾಗಿದೆ.
©2025 Book Brahma Private Limited.