ಗುಬ್ಬಿ ಜಂಕ್ಷನ್ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರ ಕವನ ಸಂಕಲನವಾಗಿದೆ. ಡಾ. ಎಚ್ಚೆಸ್ವಿ, ಮಕ್ಕಳ ಕಲ್ಪನೆಗೆ ರೆಕ್ಕೆ ಹಚ್ಚುವ, ಅವರ ಭಾವಕೋಶದಲ್ಲಿ ಬೀಡು ಬಿಡುವ ಅವರ ವೈಚಾರಿಕತೆಗೆ ಇಂಬು ಕೊಡುವ ಸಾರ್ಥಕ ರಚನೆಗಳನ್ನು ನೀಡಿದ್ದಾರೆ. ಅವರು ಮಗುವಿನ ಮುಗ್ಧ ಲೋಕವನ್ನು ಮುನ್ನೆಲೆಗೆ ತಂದು, ಆದರ ಭಾವ ಹಾಗೂ ವ್ಯಕ್ತಿಪ್ರಧಾನ ಅಂಶಗಳಿಗೆ ಮಹತ್ವ ನೀಡಿದ್ದಾರೆ. ಮಗು ಹಾಗೂ ಅದರ ಸುತ್ತಲಿನ ಪರಿಸರವನ್ನು ಕಲಾತ್ಮಕ ನೇಯ್ಗೆಯಲ್ಲಿ ಹಾಯಿಸಿ ಹಲವು ನೆಲೆಗಳು ಒಂದೇ ಕೇಂದ್ರಕ್ಕೆ ದುಡಿಯುವಂತೆ ಮಾಡಿದ್ದಾರೆ. ಎಂದು ಬಸು ಬೇವಿನಗಿಡದ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.