ಮಕ್ಕಳು ಓದಿ ಸಂತಸಗೊಂಡು ಹಾಡಿ ನಲಿಯುವಂಥ ಒಂದು ನೂರಾ ಆರು ಕವನಗಳ ಹೊತ್ತಿರುವ ಸುಂದರ ಮಕ್ಕಳ ಕವನ ಸಂಕಲನ 'ಮಕ್ಕಳಿಗಾಗಿ ನೀರಾರು ಕವಿತೆಗಳು' ಸೋಮಲಿಂಗ ಬೇಡರ ಬೀಳಗಿ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ( ಜಿ. ಬಾಗಲಕೋಟೆ ) ಮನ್ನಿಕೇರಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಮಕ್ಕಳ ಕೃಷಿ ಮಾಡುತ್ತಿದ್ದಾರೆ. ಮಕ್ಕಳ ಒಡನಾಟ ಅವರಿಗೆ ಕವನ ರಚನೆಗೆ ಸ್ಪೂರ್ತಿಯಾಗಿದೆ. ಈ ಸಂಕಲನದಲ್ಲಿನ ಕವನಗಳು ಒಂದಕ್ಕಿಂದ ಒಂದು ಚಂದ. ಗೇಯತೆಗಳಿಂದ ಕೂಡಿದ ಎಲ್ಲ ಕವನಗಳು ಹಾಡಲು ಸುಲಭ. ನಾಡು, ನುಡಿ, ಹಬ್ಬ, ಶಾಲೆ, ನಿಸರ್ಗ, ಪ್ರಾಣಿ, ಪಕ್ಷಿ, ಭೂಮಿ, ಆಕಾಶ, ಕುಟುಂಬ, ಮಳೆ, ಬಿಸಿಲು, ಚಳಿ, ರೈತ ಹೀಗೆ ಹಲವಾರು ವಿಷಯವಸ್ತುಗಳ ಮೇಲೆ ಚಂದದ ಹಾಡು ಕಟ್ಟಿ ಮಕ್ಕಳು ಗುಣುವಂತೆ ಮಾಡಿದ್ದಾರೆ. ಈ ಕೃತಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡದ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಸಮೀರವಾಡಿ ದತ್ತಿ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ದೊರೆತಿವೆ.
©2024 Book Brahma Private Limited.