ಅಕ್ಷರ ಸ್ಪಂದನ-ಭಾಗ್ಯಲಕ್ಷ್ಮಿ ಸು. ಅಮೃತಾಪುರ ಅವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ. ಲೇಖಕಿ ವೃತ್ತಿಯಿಂದ ಶಿಕ್ಷಕಿಯಾಗಿದ್ದು, ತಮ್ಮ ವೃತ್ತಿ ಅನುಭವವನ್ನು ಇಲ್ಲಿ ಮಕ್ಕಳ ಕಾವ್ಯವಾಗಿಸಿದ್ದಾರೆ. ಇವು ಖುಷಿಯಿಂದ ಹಾಡಬಹುದು.
ಉದಾ...ಢ ಅಕ್ಷರಕ್ಕೆ" ಢಂ ಢಂ ಪಟಾಕಿ ..ಹೊಡಿಬೇಡ ಧಡಾಕಿ..ಗಾಳಿಯೆಲ್ಲ ಕೆಡತ್ತೆ. ಆರೋಗ್ಯನೂ ಹಾಳಾಗತ್ತೆ" ಹೀಗೆ ಮಕ್ಕಳು ಇಷ್ಟ ಪಡುವ ನವಿಲು.,ಹೂವು, ಹಣ್ಣು. ಹಬ್ಬ. ಮೀನು. ಆನೆ ಕೋಳಿ ಮೊಲ ಬೆಕ್ಕು. ....ಎಲ್ಲವನ್ನೂ ಸರಳವಾಗಿ ಹೇಳಲಾಗಿದೆ. ಚಿತ್ರವೆಲ್ಲವನ್ನೂ ಸ್ವತಃ ಲೇಖಕರೇ ಬಿಡಿಸಿದ್ನಾದಾರೆ. 1 ರಿಂ10 ಹಾಗೂ. ಕನ್ನಡದ ಅಂಕಿ" ೦ ಇಂದ ೧೦ ರ ವರೆಗೂ ಅಂಕಿಯಿಂದ ಚಿತ್ರ ಹಾಗೂ ಕವನ ಮೂಡಿದೆ. ಉದಾ...ಎರಡು ಅಂಕಿ ಬರೆದೆ...ಹಂಸ ಮಾಡಿ ನಲಿದೆ...ಏನು ಅಂದ ಎಷ್ಟು ಚಂದ ...ಬಣ್ಣ ಹಚ್ಚಿ ಕುಣಿದೆ.. ಆರು ಬರೆಯಲು ಕಲಿಯೋ ತಮ್ಮ...ಅದರಲಿ ಆನೆ ಮೂಡಿದು ತಿಮ್ಮ...ಆನೆಗೆ ಆಡಲು ಚಂಡು ಬೇಕು...ಚಂಡನು ದೂಡಲು ಸೊಂಡಿಲೆ ಸಾಕು. ಹೀಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಹಾಗೆ ಎಚ್ಚರವಹಿಸಲಾಗಿದೆ.
ಮಕ್ಕಳ ಸಾಹಿತಿ ಆನಂದ ಪಾಟೀಲ ಮುನ್ನುಡಿ ಬರೆದಿದ್ದು, ಕ್ಷೇತ್ರ. ಶಿಕ್ಷ್ಣಣ ಅಧಿಕಾರಿ ಡಿ. ಆರ್. ಅಮಿತ್. ಅವರು" ಹೊಸ ಆಯಾಮಕ್ಕೊಂದು ಪೂರಕ ಮಾತು" ಶೀರ್ಷಿಕೆಯೊಂದಿಗೆ ಶುಭ ಹಾರೈಸಿದ್ದಾರೆ.
©2025 Book Brahma Private Limited.