ಖ್ಯಾತ ಸಾಹಿತಿ, ವಿಮರ್ಶಕ ಡಾ. ಕೆ.ವಿ. ತಿರುಮಲೇಶ್ ಅವರು ಬರೆದ ಮಕ್ಕಳ ಕವನ ಸಂಕಲನ-ಅಟ್ಟದಲ್ಲೇನಿದೆಯೋ ಪುಟ್ಟನಿಗೇ ಗೊತ್ತು...!. ಮಕ್ಕಳ ಕುತೂಹಲಕ್ಕೆ ಸಾಟಿಯೇ ಇಲ್ಲ. ಅವರ ಅದ್ಭುತ ಕಲ್ಪನಾ ಲೋಕವೂ ಅಷ್ಟೇ. ವಾಸ್ತವ ಲೋಕದ ಜಡ ವಸ್ತುಗಳನ್ನೂ ಸಹ ಹಸುಳೆಗಳು ಕಲ್ಪನಾಲೋಕದ ಮೂಲಕವೇ ಗ್ರಹಿಸುತ್ತವೆ. ಗೊಂಬೆಗಳು ಅವರಿಗೆ ಜೀವಂತ ವ್ಯಕ್ತಿಗಳಾಗಿ ಕಾಣಬರುವುದು ಈ ಕಾರಣಕ್ಕಾಗಿಯೇ. ಇಂತಹ ಸೂಕ್ಷ್ಮ ಮನಸ್ಸಿನ ಪದರುಗಳನ್ನು ಅಭ್ಯಸಿಸಿ, ಮಕ್ಕಳ ಮನೋಮಟ್ಟಕ್ಕೆ ಇಳಿದು, ಅವರಿಗೆ ತಿಳಿಯುವ ಸರಳ ಭಾಷೆಯಲ್ಲಿ ಕವಿತೆಗಳಿರುವುದು ಈ ಸಂಕಲನದ ವಿಶೇಷ. ಮಕ್ಕಳು ತಂದೆ-ತಾಯಿಯ ಮನಸ್ಸನ್ನು ಬೇಗನೇ ಆರ್ಥ ಮಾಡಿಕೊಳ್ಳುತ್ತಾರೆ. ಆದರೆ, ಅವುಗಳಿಗೆ ಅದನ್ನು ಹೇಳಲು ಬಾರದಷ್ಟೇ. ಮನೆಯ ಪ್ರತಿಯೊಂದು ಚಲನವಲನವನ್ನು ತಮ್ಮದೇ ಗ್ರಹಿಕೆಯ ಮೂಲಕ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ತಿನ್ನುವ ಪದಾರ್ಥಗಳನ್ನು ತಾಯಿ ಎಲ್ಲಿಟ್ಟಿರುತ್ತಾಳೆ ಎಂಬುದನ್ನು ಮಗು ಸೂಕ್ಷ್ಮವಾಗಿ ಗ್ರಹಿಸಿರುತ್ತದೆ. ಮನಸ್ಸಿನ ಸೂಕ್ಷ್ಮತೆಯ ಸಂಕೇತವಾಗಿ ಕವಿಯು ‘ಅಟ್ಟದಲ್ಲೇನಿದೆಯೋ ಪುಟ್ಟನಿಗೇ ಗೊತ್ತು..! ಎಂಬ ಶೀರ್ಷಿಕೆಯ ಮೂಲಕ ಕೃತಿಯ ಅರ್ಥವಂತಿಕೆ ಹೆಚ್ಚಿಸಿದ್ದಾರೆ.
©2025 Book Brahma Private Limited.