ಲೇಖಕ ವಿರೂಪಾಕ್ಷ ಕೋರಗಲ್ ಅವರ ಮಕ್ಕಳ ಕವನ ಸಂಕಲನ ಕೃತಿ ʻಮೀಶೆಯ ಜೋಕಾಲಿʼ. ಮಕ್ಕಳಿಗಾಗಿ ರಚಿಸಿದ 25 ಪದ್ಯಗಳು ವಿಭಿನ್ನವಾದ ಕಥಾವಸ್ತುಗಳನ್ನು ಹಾಗೂ ಅದಕ್ಕೆ ತಕ್ಕಂಥ ಚಿತ್ರಗಳನ್ನು ಹೊಂದಿವೆ. ಅವುಗಳು ಲೇಖಕರು ಸುಮಾರು ಇಪ್ಪತ್ತು ವರ್ಷಗಳಿಂದ ಬರೆದ ಪದ್ಯಗಳಾಗಿವೆ. ಮಕ್ಕಳಲ್ಲಿ ಓದುವಿಕೆ ಹೆಚ್ಚಿಸಲು ಹಾಗೂ ಆ ಮೂಲಕ ಜ್ಞಾನ ವೃದ್ದಿಸಲು ಈ ಪುಸ್ತಕ ರಚಿಸಲಾಗಿದೆ. ಪುಸ್ತಕದ ಪರಿವಿಡಿಯಲ್ಲಿ ಬದುಕುವ ವಿದ್ಯೆ, ಜಾಣ ಮೊಲ, ಹಾಲು ಮತ್ತು ಮೊಸರು, ಕೋಳಿ ಕೂಗಿದರೆ ಬೆಳಗು, ಬೆಣ್ಣೆಡ ಕದ್ದ ಬೆಕ್ಕುಗಳು, ಬೊಗಳುವ ನಾಯಿ, ತಿಂಡಿಯ ಡಬ್ಬಿ, ನೊಣದ ಗಾನ, ಗಾಂಧಿ ತಾತ ಮೂಂತಾ ಶಿರ್ಷಿಕೆಗಳಲ್ಲಿ ಪದ್ಯಗಳಿವೆ.
©2024 Book Brahma Private Limited.