ಹೊಸ ಕಾಲದ ಮಕ್ಕಳಿಗೆ ಹೊಸ ಸಂವೇದನೆಯನ್ನು ರಚಿಸುವ ಉದ್ದೇಶದಿಂದ ಎಚ್.ಎಸ್. ವೆಂಕಟೇಶಮೂರ್ತಿಯವರ ಸಂಪಾದಕ್ವದಲ್ಲಿ ಹುಟ್ಟಿದ ಕೃತಿ ಕೆ.ವಿ. ತಿರುಮಲೇಶ್ ಅವರ ‘ಪುಟ್ಟನ ಮನ’ ಕವನಸಂಕಲನ. ಭೂತಗಳು, ಗುಮ್ಮಗಳು, ಯಕ್ಷಿಗಳು, ಏನೇನೋ ಅತಿಮಾನುಷ ಶಕ್ತಿಗಳು ನಮ್ಮ ಕಣ್ಣಿಗೆ ಕಂಡೂ ಕಾಣದಂತೆ ಅಲ್ಲಿ ಓಡಾಡುತ್ತಿದ್ದುವು. ಇನ್ನು ನನ್ನ ಹುಲ್ಲು ಹೊದೆಸಿದ ಮಣ್ಣಿನ ಮನೆ, ಹಟ್ಟಿ, ಕೊಟ್ಟಿಗೆಗಳು, ಅಂಗಳ, ತೋಟ, ಕಾಡುಗಳು, ಕೆರೆ ತೊರೆ ತೋಡುಗಳು, ಹಾಸುಪಾರೆಗಳು, ಮುಳಿಗುಡ್ಡೆಗಳು, ಮನೆಯವರು, ನೆರೆಯವರು, ಬದಲಾಗುತ್ತಿರುವ ಋತುಮಾನಗಳು, ಆಳುಕಾಳುಗಳು, ಪೂಜೆ ಪುರಸ್ಕಾರಗಳು, ಉತ್ಸವಗಳು, ಜಾತ್ರೆಗಳು, ಸಂತೆಗಳು, ಮದುವೆ ಮುಂಜಿಗಳು, ತಿಥಿ ಶ್ರಾದ್ಧಗಳು, ರೋಗ ರುಜಿನಗಳು, ಸಾವು ನೋವುಗಳು, ಕನಸು ನೆನಸುಗಳು, ತಿರುಗುತ್ತಿರುವ ಕಾಲಚಕ್ರ, ತಾಳೆ ಬಾಳೆ ತೆಂಗು ಕಂಗುಗಳು, ಪಶು ಪಕ್ಷಿ ಹಕ್ಕಿ ಪ್ರಾಣಿಗಳು, ಭಿಕ್ಷುಕರು ಇವೆಲ್ಲವೂ ಇಲ್ಲಿನ ಕವನ ವಸ್ತುಗಳಾಗಿದೆ.
©2024 Book Brahma Private Limited.