‘ಬಾರೋ ಕಂದ ಶಾಲೆಗೆ’ ಕೃತಿಯು ಮೈಲಾರಪ್ಪ ಬೂದಿಹಾಳ ಅವರ ಮಕ್ಕಳ ಪದ್ಯ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬೇರೆ ರೀತಿಯ ಸಾಹಿತ್ಯ ರಚನೆಗಿಂತ ಮಕ್ಕಳ ಕಾವ್ಯರಚನೆ ತುಂಬಾ ಭಿನ್ನವಾಗಿರುವಂತಹದ್ದು. ಹಿರಿಯ ಕಾವ್ಯದಲ್ಲಿ ಯಾವ ರೀತಿಯಲ್ಲಿ ಬರೆದರೂ ಅದು ಕಾವ್ಯ ಎಂದು ಕರೆಯಿಸಿಕೊಳ್ಳುವುದು. ಆದರೆ ಮಕ್ಕಳ ಕಾವ್ಯ ಕಟ್ಟುವಾಗ ಮಾತ್ರ ಹಾಗಾಗುವುದಿಲ್ಲ. ಸರಳ ಭಾಷೆಯೊಂದಿಗೆ ಲಯದೊಂದಿಗೆ ಮಕ್ಕಳು ಇಷ್ಟ ಪಡುವ ವಿಷಯ ಮತ್ತು ವಸ್ತುಗಳನ್ನು ಆಯ್ಕೆ ಮಾಡಿಕೊಂಡು, ಮಕ್ಕಳು ಆ ವಸ್ತುವಿನ ಬಗ್ಗೆ ಎಂಥಾ ಭಾವನೆ ಹೊಂದಿರುತ್ತಾರೆ ಎಂದು ಊಹಿಸಿಕೊಂಡು ಕಾವ್ಯ ಹೊಸೆಯಬೇಕಾಗುತ್ತದೆ. ಹೀಗಾಗಿ ಮಕ್ಕಳ ಕವಿತೆ ಬರೆಯುವುದೆಂದರೆ ಅದೊಂದು ಸವಾಲೇ ಸರಿ ಎನ್ನುತ್ತಾರೆ ಇಲ್ಲಿ ಕವಿ. ಇನ್ನು ಇಲ್ಲಿನ ಚಿಟ್ಟೆ ಕವಿತೆಯೊಂದಿಗೆ ಬೂದಿಹಾಳರ ಕಲ್ಪನೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಚಿಟ್ಟೆಯ ಅಂದವನ್ನು ನೋಡಿದ ಮಗು ಅದರ ಬಣ್ಣದ ರೆಕ್ಕೆಗಳಿಗೆ ಮನ ಸೋಲುತ್ತದೆ.ಸುಂದರವಾದ ತೋಟದಲ್ಲಿ ಶುದ್ದವಾದ ಗಾಳಿ, ಸ್ವಚ್ಛವಾದ ಪರಿಸರದಲ್ಲಿ ಚಿಟ್ಟೆ ಇರುವಂತೆ ಮಗು ತಾನೂ ಇರಲು ಆಶಯವನ್ನು ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.
©2025 Book Brahma Private Limited.