ಎನ್. ಶ್ರೀನಿವಾಸ ಉಡುಪ ಅವರ ಮಕ್ಕಳ ಕವನಗಳ ಸಂಗ್ರಹ ಪಾಪು ಪದ್ಯಗಳು. ಮಕ್ಕಳ ಕಥೆ, ಕವನಗಳನ್ನು ರಚಿಸುವಲ್ಲಿ ಪ್ರಮುಖರಾಗಿರುವ ಶ್ರೀನಿವಾಸ ಉಡುಪ ಅವರು ‘ಗಣಪ ನಿನಗೆ ಯಾಕೆ ಇಂಥ ಉದ್ದ ಸೊಂಡಿಲು ?, ನೆಗಡಿ ಬಂದರೆಷ್ಟು ಕಷ್ಟ ಒರೆಸಿಕೊಳ್ಳಲು? ಎಂಬ ಸಾಲುಗಳನ್ನು ಕೃತಿಯ ಮುಖಪುಟದಲ್ಲಿ ಬರೆಯುವ ಮೂಲಕ ಕೃತಿಯ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ. ಮೇಲಕ್ಕೆ ಕೆಳಕ್ಕೆ ಥಕ ಫಕ ಕುಣಿದಿದೆ ಗುಂಡಾಭಟ್ಟರ ಹೊಟ್ಟೆ! ಹತ್ತೀ ಮೂಟೇ- ಎಂದೇ ತಿಳಿದು ಕುಳಿತಿದೆ ಪುಟಾಣಿ ಚಿಟ್ಟೆ! ಈ ಬಗೆಯ ಕನ್ನಡದ ಮುದ್ದಾದ ಮಕ್ಕಳ ಪದ್ಯಗಳ ಸಂಕಲನ.
©2024 Book Brahma Private Limited.