ʼಮುತ್ತು ರತ್ನʼ ಕವಿ ಬಿ.ಎಚ್.ಶ್ರೀಧರ ಅವರು ರಚಿಸಿದ ಶಿಶು ಗೀತೆಗಳ ಸಂಕಲನ. ಧಾರವಾಡ ಆಕಾಶವಾಣಿಯ ಗಿಳಿವಿಂಡು ಕಾರ್ಯಕ್ರಮಕ್ಕಾಗಿ ರಚಿತವಾದ ಕವಿತೆಗಳಿವು. ಮಕ್ಕಳು ದ್ವನಿಗೂಡಿಸಿ ಹಾಡಿದ ಈ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ. ಪುಸ್ತಕದ ಪರಿವಿಡಿಯಲ್ಲಿ ಒಡನಾಡಿಗಳ ಓಲಗೆ, ವೀರಗಾನ, ಬಾಳಿನ ಗುಟ್ಟು, ಉತ್ಸಾಹ, ಬೆಳಗಿನ ಕರೆ, ಬೆಳದಿಂಗಳೂಟ, ಗೆಳೆತನ, ತೇರು-ಕಾರು, ಉಪಮೆ, ಸಿಹಿಗಡಲು, ಆಕಸ್ಮಾತು, ಪಾರ್ಲಿಮೆಂಟು, ಯಕ್ಷಗಾನ, ನಾವು ಹಾಗೂ ಮದುವೆ ಹೀಗೆ ವಿವಿಧ ಶೀರ್ಷಿಕೆಗಳ ಶಿಶು ಗೀತೆಗಳಿವೆ.
©2024 Book Brahma Private Limited.