ನಮ್ಮ ದೇಶ ಭಾರತ

Author : ಅಕಬರ ಎ ಸನದಿ

Pages 52

₹ 30.00




Year of Publication: 2000
Published by: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ
Address: ಜಿಲ್ಲಾ ಘಟಕ ಬೆಳಗಾವಿ.
Phone: 0833373938

Synopsys

ಕವಿ ಅಕಬರ ಸನದಿ ಅವರು ಮಕ್ಕಳ ಮನೋಭೂಮಿಕೆಯಲ್ಲಿ ಮಾನವಿಕ ಗುಣಗಳನ್ನು ಬಿತ್ತಿ ಬೆಳೆಯಲು ಮತ್ತು ಉದ್ದಾತ್ತ ಜೀವನದತ್ತ ಸಾಗುವಂತೆ ಮಾರ್ಗದರ್ಶನ ಮಾಡಲು ರಚಿಸಿರುವ ಕೃತಿಯೇ -ಈ ನಮ್ಮ ದೇಶ ಭಾರತ. ಮಕ್ಕಳು ಈ ಜಾತಿ-ಮತ, ಪಂಥಗಳಿಂದ ದೂರವಿರಬೇಕು, ಪ್ರತಿಯೊಬ್ಬ ಮಗುವೂ ದೇಶಭಕ್ತನಾಗಬೇಕು, ನಾಡು-ನುಡಿ ಸೇವೆಯಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬ ಆಶಯಗಳಿವೆ. ಸ್ವಾತಂತ್ಯ್ರ ಹೋರಾಟಗಾರರ ಕುರಿತ ಕವಿತೆಗಳು ಮಕ್ಕಳಲ್ಲಿ ದೇಶಭಕ್ತಿ ಮೂಡಿಸುತ್ತವೆ. ಬಳಸಿರುವ ಭಾಷೆಯು ಸರಳವಾಗಿದೆ, ಪ್ರಾಸಬದ್ಧವಾಗಿದ್ದು, ಗಮನ ಸೆಳೆಯುತ್ತವೆ. 

About the Author

ಅಕಬರ ಎ ಸನದಿ

ಕವಿ ಅಕಬರ ಎ. ಸನದಿ ಅವರು ಬೆಳಗಾವಿ ತಾಲುಕಿನ ಶಿಂದೋಳ್ಳಿ ಗ್ರಾಮದವರು. ಸಂಕೇಶ್ವರದ ಹಿಂದೂಸ್ಥಾನ್‌ ಲೇಟೆಕ್ಸ್‌ ಕಾರ್ಖಾನೆಯಲ್ಲಿ ತಾಂತ್ರಿಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡ ಹೋರಾಟಗಾರರು.  ಕೃತಿಗಳು: ನಮ್ಮ ದೇಶ ಭಾರತ, ಗಿಲ್‌ ಗಿಲ್‌ ಗೆಜ್ಜೆ, ಕರುನಾಡ ಸಿರಿ, ಹಾಗೂ ಚೆಲುವ ಕನ್ನಡ ನಾಡು (ಮಕ್ಕಳ ಕವನ ಸಂಕಲನಗಳು) ನನ್ನವಳಿಗಾಗಿ (ಪ್ರೇಮದ ಮುಕ್ತಕಗಳ ಸಂಕಲನ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದು,  ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ...

READ MORE

Related Books