"ನನ್ನ ಪುಟ್ಟ ಗೊಂಬೆ"-ಲೇಖಕಿ ಭಾಗ್ಯಲಕ್ಷ್ಮಿ ಸು. ಅಮೃತಾಪುರ ಅವರು ಮಕ್ಕಳಿಗಾಗಿ ಬರೆದ ಒಟ್ಟು 33 ಕವನಗಳಿರುವ ಸಂಕಲನ. ಪರಿಸರ ಗೊಂಬೆ , ಹಬ್ಬ, ಆರೋಗ್ಯ,ಶಿಸ್ತು, ಸ್ನೇಹ, ಬಾಂಧವ್ಯ. ತುಂಟಾಟ, ಒಟ್ಟು ಕುಟುಂಬದ ನಲಿವು. ಪ್ರೀತಿ, ನಾಡಹಬ್ಬ.ಹೀಗೆ ಶೀರ್ಷಿಕೆಗಳಿರುವ ಕವನಗಳಿವೆ. ಮೀನು ಮತ್ತು ನಾನು, ಪುಟ್ಟಿ ಮಾತು, ನಮ್ಮನೆ ಬೆಕ್ಕು, ಅಯ್ಯೋ ನನ್ನ ಗುಬ್ಬಿ, ಪುಟ್ಟನ ಕಾರು, ತುಂಟ ಬಂಟಿಗೆ ಕಳ್ಳ ನೋವು, ಕಸಗೆ ಕಾಗೆ ಕರ್ರಗೆ, ಚಂದಮಾಮ, ಒಲ್ಲೆನಮ್ಮ ಎಣ್ಣೆ ಸ್ನಾನ....ಟೀಚರ್ ಆಟ ಇತ್ಯಾದಿ.
ಪ್ರತಿ ಕವನಕ್ಕೂ ಅರ್ಥಪೂರ್ಣ ಚಿತ್ರಗಳಿವೆ. ಮಕ್ಕಳಿಗೆ ಬೇಕಾದ ವಸ್ತುಗಳು ಇಲ್ಲಿ ಕಾವ್ಯದ ಅಂಶಗಳಾಗಿವೆ. ಸಾಹಿತಿ ಹಾಗೂ ಶಿಕ್ಷಣಾಧಿಕಾರಿ ಜಿ. ಎಂ. ಬಸವಲಿಂಗಪ್ಪ ಮುನ್ನುಡಿ ಬರೆದಿದ್ದರೆ ಬಿ. ಆರ್. ಸಿ. ತಿಪ್ಪೇಸ್ವಾಮಿ ಅವರು ‘ಮಕ್ಕಳೊಂದಿಗೆ ಚಿಗುರಿದ ಚಿಂತನೆ ’ ಶೀರ್ಷಿಕೆಯಡಿ ಶುಭ ಹಾರೈಸಿದ್ದಾರೆ.
©2025 Book Brahma Private Limited.