‘ಪುಟ್ಟಿಯ ಆಸೆ’ ಕೃತಿಯು ಅಕ್ಬರ್ ಸಿ. ಕಾಲಿಮಿರ್ಚಿ ಅವರ ಮಕ್ಕಳ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಇಲ್ಲಿ ಸಮಾಜದ ಒಳಿತಿನ ಪ್ರೀತಿಯನ್ನು ಹರವಿಕೊಂಡಿದ್ದಾರೆ. ಮಕ್ಕಳಿಗಾಗಿ ಪಾಠ ಮಾಡುವ, ಅವರ ಸಾಹಯಕ್ಕೆ ಇಳಿಯುವ, ಅಸಹಾಯಕರಿಗೆ ಸಹಾಯಕರಾಗುವಂತಹ ಕಾರ್ಯಗಳೆಲ್ಲ ಬಹು ಪ್ರೀತಿಯಿಂದ ತೊಡಗಿಕೊಳ್ಳುವ ಅಕ್ಬರ್ ಕಾಲಿಮಿರ್ಚಿ ಬರಹದಲ್ಲೂ ತೊಡಗಿಕೊಂಡಿದ್ದಾರೆ. ಕತೆ, ಕವನ, ಪ್ರಬಂಧ, ಮಕ್ಕಳ ಹಾಡುಗಳನ್ನೆಲ್ಲ ಪ್ರಕಟಿಸಿ ಪರಿಚಿತರಾಗಿದ್ದಾರೆ. ಬಸ್ಸನು ಏರಿ ಸೀಟಳಿ ಕುಳಿತ ಪೆಟ್ರೋಲ್ ಇಲ್ಲದೆ ಬಸ್ಸನು ಚಲಿಸಿದ ನಿಜ, ಪುಟ್ಟ ಮಕ್ಕಳು ಹಾಗೆಯೇ ಅವರ ಕಾಲ್ಪನಿಕ ಜಗತ್ತು ವಿಸ್ತಾರವಾದದ್ದು. ಅವರು ನಿಂತಲ್ಲಿಯೇ ರಾಜರಾಗುತ್ತಾರೆ, ಸೈನಿಕರಾಗುತ್ತಾರೆ, ಮೋಡ ಏರುತ್ತಾರೆ, ಮರದೊಂದಿಗೆ ಮಾತಿಗಿಳಿದು, ಆಕಾಶ ಸುತ್ತಾಡಿ ಯಾವುದೋ ಹಾರಾಡುವ ರೋಬೋನ ಹೆಗಲೇರಿ ಕೆಳಗಿಳಿದುಬಿಡುತ್ತಾರೆ. ಬಸ್ಸು ಏರುವುದು, ಸೀಟು ಹಿಡಿಯುವುದು, ತಾನಾಗಿ ಚಲಿಸುವುದು ಎಲ್ಲ ಅವರು ನಿಂತಲ್ಲಿಯೇ ಕಲ್ಪಿಸಿ ಸಂಭ್ರಮಿಸುತ್ತಾರೆ. ನಾವು ದೊಡ್ಡವರು ಕಲ್ಪನೆಯನ್ನು ತರ್ಕದ ಒರೆಗೆ ಹಚ್ಚಿ ಚಿಂತಿತರಾಗುತ್ತಾರೆ ಹೆಚ್ಚು ಎಂಬುದಾಗಿ ಇಲ್ಲಿ ವಿಶ್ಲೇಷಿತವಾಗಿದೆ.
©2024 Book Brahma Private Limited.