’ಮಕ್ಕಳ ಸಾಹಿತ್ಯ 2012-2013’ ಕೃತಿಯು ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳ ಸಾಹಿತ್ಯ ವಿಶೇಷವಾಗಿ ಕವನಗಳನ್ನು ಸಂಪಾದಿಸಿದ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಪ್ರಸ್ತುತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕವಿತೆ, ಕಥೆ, ಕಾದಂಬರಿ, ಪ್ರಬಂಧ, ಆತ್ಮಕಥೆ ಬರೆಯುವ ಲೇಖಕರಿಗೂ ಕೊರತೆಯಿಲ್ಲ. ಆದರೆ, ಮಕ್ಕಳಿಗಾಗಿ ಬರೆಯುವವರ ಸಂಖ್ಯೆ ಬಹಳ ಕಡಿಮೆ. ಇದು ಕನ್ನಡ ಸಾಹಿತ್ಯದ ಸಮಗ್ರ ಬೆಳವಣಿಗೆಗೆ ಅಂಟಿದ ಮೋಸ. ವಸ್ತು, ಭಾಷೆ, ನಿರೂಪಣಾ ತಂತ್ರಗಳ ದೃಷ್ಟಿಯಿಂದ, ಮಕ್ಕಳ ಸಾಹಿತ್ಯಕ್ಕೆ ಹೊಸ ಹೊಸ ಪ್ರಯೋಗಗಳ ಅಗತ್ಯವಿದೆ. ಆಧುನಿಕ ಮಾಹಿತಿ ತಂತ್ರಜ್ಞಾನದ ನಾಗಾಲೋಟದ ಈ ದಿನಗಳಲ್ಲಿ ಮಕ್ಕಳಿಗೆ ಎಂತಹ ಸಾಹಿತ್ಯ ಬೇಕು ಎಂಬುದನ್ನು ಹಾಗೂ ಮಕ್ಕಳ ಮನಸ್ಸನ್ನು ಆಕರ್ಷಿಸುವ, ಆ ಮೂಲಕ ಮಗುವಿನ ಮನಸ್ಸನ್ನು ವಿಕಸನಗೊಳಿಸುವ ವಸ್ತು ವಿಷಯಗಳನ್ನು ಮತ್ತು ನಿರೂಪಣಾ ವಿಧಾನವನ್ನು ಮಕ್ಕಳ ಸಾಹಿತಿಗಳು ಕರಗತಗೊಳಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ, ಈ ಸಂಕಲನವು ಹಿರಿಯ ಹಾಗೂ ಕಿರಿಯ ಸಾಹಿತಿಗಳ ಮಕ್ಕಳ ಕತೆ-ಕವನಗಳನ್ನು ಒಳಗೊಂಡಿದ್ದು, ಹಳೆ-ಹೊಸ ಪ್ರವಾಹಗಳ ಸಮೃದ್ದ ಮಕ್ಕಳ ಸಾಹಿತ್ಯ ವಾಹಿನಿಯ ಪರಿಚಯ ಮಾಡಿ ಕೊಡುತ್ತದೆ' ಎಂದು ಪ್ರಸ್ತಾಪಿಸಲಾಗಿದೆ.
©2024 Book Brahma Private Limited.