‘ಚಿಣ್ಣರ ಚೈತ್ರ’ ಲೇಖಕ ಬಾಪು ಗ. ಖಾಡೆ ಅವರು ಬರೆದ ಮಕ್ಕಳ ಕವಿತೆಗಳು. ಈ ಕೃತಿಗೆ ಹಿರಿಯ ಸಾಹಿತಿಗಲಾದ ಡಾ. ಆನಂದ. ಪಾಟೀಲ ಮತ್ತು ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರು ಬೆನ್ನುಡಿ ಬರೆದಿದ್ದಾರೆ. ಕೃತಿಯಲ್ಲಿ 32 ಪದ್ಯಗಳಿವೆ. ಛಂದೋಬದ್ಧವಾದ, ನವುರಾದ, ಕಲ್ಪಕತೆಯ, ಹಾಡಬಹುದಾದ ಬಾಪು ಅವರ ಕವಿತೆಗಳು ನನಗೆ ಇಷ್ಟವಾಗಿವೆ’ ಎನ್ನುತ್ತಾರೆ.
ಬಾಪು ಅವರ ಕವಿತೆಗಳು ಕಟೆದಿಟ್ಟ ಸುಂದರ ಶಿಲ್ಪಗಳಂತಿವೆ. ಲಯ ಶುದ್ಧವಿಲ್ಲದ ಒಂದೇ ಪದ್ಯವನ್ನು ಅವರು ಬರೆದಿಲ್ಲ. ಕೆಲವು ಪದ್ಯಗಳಲ್ಲಿ ಕಾವ್ಯದ ಮಿಂಚಿನ ಹೊಳವುಗಳಿವೆ. ವಸ್ತು ವೈವಿಧ್ಯ ಕೂಡಾ ಮೆಚ್ಚಬೇಕಾದ್ದು. ಅವರ ಪದ್ಯಗಳಲ್ಲಿ ಕಿವಿ ಮತ್ತು ಸ್ಪರ್ಶದ ಗ್ರಹಿಕೆಗಳು ಬಹು ಸುಂದರವಾಗಿ ಮೂರ್ತಗೊಂಡಿವೆ. ಕನ್ನಡ ಮಕ್ಕಳ ಸಾಹಿತ್ಯದ ಬೆಳೆಗೆ ಬಾಪು ಅವರದ್ದು ಚೆಲುವಾದ ಅರ್ಥ ಸಂಪನ್ನ ಕೊಡುಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
©2025 Book Brahma Private Limited.