ಲೇಖಕ ಟಿ.ಪಿ. ಉಮೇಶ್ ಅವರು ಮಕ್ಕಳಿಗಾಗಿ ಬರೆದ ಕವಿತೆಗಳ ಸಂಕಲನ-ಅಪ್ಪ ಕೊಡಿಸಿದ ಮೊದಲ ಪುಸ್ತಕ. 36 ಕವಿತೆಗಳಿವೆ. ಕವಿತೆಯ ಭಾವಕ್ಕೆ ತಕ್ಕಂತೆ ಚಿತ್ರಗಳಿದ್ದು, ಹೆಚ್ಚು ಮೆರುಗು ನೀಡಿವೆ. ಕವಿಗಳು ಬರೆದ ಒಟ್ಟು 5 ಕೃತಿಗಳ ಪೈಕಿ ಮಕ್ಕಳಿಗಾಗಿ ಬರೆದವುಗಳು ಎರಡು. ಸಾಹಿತಿ ಆನಂದ ಪಾಟೀಲ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಕವಿಗಳು ತಮ್ಮ ಮುಂದೆ ದಿನದಿನವೂ ಕಾಣುವ ಪುಟ್ಟಮಕ್ಕಳಿಗಾಗಿ ಬಗೆಬಗೆಯ ವಸ್ತು ವೈವಿಧ್ಯತೆಯ ರಚನೆಗಳನ್ನು ನೀಡಲು ಬಯಸಿದ್ದಾರೆ. ಬಾಲ್ಯದ ನವಿರು ಅನುಭವಗಳು, ಕಲಿತ ವಾತಾವರಣದ ಗಾಢ ನೆನಪುಗಳು, ಸಂಬಂಧಗಳ ಅನುಬಂಧದ ಮಹತ್ವಗಳು, ನೆರೆ ಹೊರೆಯ ಕೆಳೆಯರೊಡನಾಡಿದ ಆಟ ತುಂಟಾಟಗಳು, ಭವಿಷ್ಯದ ಕನಸುಗಳು...ಎಲ್ಲ ಇಲ್ಲಿ ಚಂದ ಪ್ರಾಸಗಳಲಿ ಆಹ್ಲಾದಕರ ಪದ್ಯಗಳಲಿ ಚಿತ್ರವತ್ತಾಗಿ ಮಕ್ಕಳನ್ನು ಮುದಗೊಳಿಸುತ್ತವೆ.’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.