ತಮ್ಮಣ್ಣ ಬೀಗಾರ ಅವರ ’ ಜೀಕ್ ಜೀಕ್’ ಕೃತಿಯು ಮಕ್ಕಳ ಕವನಸಂಕಲನವಾಗಿದೆ. ಕೃತಿಗೆ ಮುನ್ನಡಿ ಬರೆದಿರುವ ಎಚ್.ಎಸ್. ವೆಂಕಟೇಶ ಮೂರ್ತಿ ಅವರು, ತಮ್ಮ ಲೇಖನಿಯನ್ನು ಮಕ್ಕಳ ಸಾಹಿತ್ಯ ರಚನೆಗೆ ಮೀಸಲಿಟ್ಟಿರುವ ಕವಿ ತಮ್ಮಣ್ಣ ಬೀಗಾರ. ಅವರ 'ಜೀಕ್ ಜೀಕ್' ಸಂಗ್ರಹದ ಕವಿತೆಗಳು ಶುದ್ಧವಾದ ಭಾಷೆ, ಶುದ್ಧವಾದ ಲಯ; ಆರೋಗ್ಯವಂತ ದೃಷ್ಟಿಕೋನಗಳ ಹಾಗೂ ಮಕ್ಕಳಿಗೆ ಪ್ರಿಯವಾಗಬಹುದಾದ ಪ್ರಾಣಿಪಕ್ಷಿ ಪ್ರಪಂಚವನ್ನು ಒಳಗೊಂಡಿದೆ. ಈ ಕಾರಣಗಳಿಂದ ತಮ್ಮಣ್ಣ ಬೀಗಾರ ಅವರ ಈ ಕವಿತೆಗಳು ಆಕರ್ಷಕವಾಗಿವೆ. ಹೀಗೊಂದು ಮದುವೆ, ನರಿಯ ನಗು, ಸಂಚಿನ ತೋಳ, ಮರೆತ ನೋವು, ಮರುಗಲೇನಿದೆ? - ಮೊದಲಾದ ಕವಿತೆಗಳು ಇಲ್ಲಿ ಮಕ್ಕಳಿಗೆ ಪ್ರಿಯವಾಗುವಂತಿವೆ ಎನ್ನುತ್ತಾರೆ.
©2025 Book Brahma Private Limited.