ಮಕ್ಕಳಂಗಳದಲ್ಲಿ ಕಾವ್ಯ ತೊರೆ ಮಲ್ಲಿನಾಥ ಎಸ್ ತಳವಾರ ಅವರ ಕೃತಿಯಾಗಿದೆ. ಎ.ಕೆ. ರಾಮೇಶ್ವರ ಅವರು 90 ರ ಆಂಚಿನಲ್ಲಿರುವ ಹಿರಿಯ ಸಾಹಿತಿಗಳು, ಮಕ್ಕಳ ಸಾಹಿತ್ಯದ ಭೀಷನೆಂದೇ ಕೆಲವರು ಇವರನ್ನು ಕೊಂಡಾಡುತ್ತಾರೆ. ತನ್ನ ಮಕ್ಕಳ ಕನವಗಳು, ಕಥೆ, ಜೀವನ ಚರಿತ್ರೆ ನಾಟಕಗಳನ್ನು ಪಠ್ಯಪಸ್ತಕಗಳಲ್ಲಿ ಕಾಗದದ ದೋಣಿಯಂತೆ ಹರಿಬಿಡುತ್ತಲಿದ್ದು ಕನ್ನಡ ನಾಡಿನ ಪುಟಾಣಿಗಳ ಹೃದಯ ಸಾಮ್ರಾಟರಾಗಿದ್ದಾರೆ. ತಮ್ಮ ಸಾಧನೆಯ ಗುರಿ ತಲುಪಿ ಅನೇಕ ಮಾನ, ಸನ್ಮಾನ ಸತ್ಕಾರ, ಬಹುಮಾನ ಪ್ರಶಸ್ತಿಗಳನ್ನು ಸಂಪಾದಿಸಿ ಬಾಚಿಕೊಳ್ಳುವುದರೊಂದಿಗೆ ತಮ್ಮ ವಿದ್ಯಾಗುರುಗಳಾದ ಶ್ರೀ ಶಂ.ಗು. ಬಿರಾದಾರ ಅವರಿಗೆ ಅರ್ಪಿಸಿ ಋಣ ತೀರಿಸಲು ಪ್ರಯತ್ನಿಸಿದ್ದಾರೆ. ನಂದಿಕೋಲು, ವಸಂತಬಂದ, ಹಕ್ಕಿ ಹಾರುತಿದೆ. ಬನ್ನಿರಿ ಮನುಕುಲ ಚಂದಿರರೆ, ಚಂದ್ರ ಮೂಡಿಬಂದ, ಹುಲಿಯಹಾಲಿನ ಗಿಣ್ಣ, ದೇವಗಾರುಡಿಗ ಬೆಳಗುತಿರುವ ಭಾರತ, ಸುಲಿದಬಾಳೆಯ ಹಣ್ಣು, ಬೆಳಕು ನೀಡಿದ ಬಾಲಕರು ಸಂಕಲನಗಳನ್ನು ಪ್ರತಿಪದವನ್ನು ಬಿಡದೆ ಓದಿದ ಮಲ್ಲಿನಾಥ ತಳವಾರರು ಕವನದ ತಲೆ ಬರಹದ ಔಚಿತ್ಯ, ವಿಷಯ, ವೈಚಿತ್ರ, ಪ್ರಾಸ ಅರ್ಥ ಹಾಗೂ ಆಕರ್ಷಣೆಗಳನ್ನು ಬಿಚ್ಚಿ ತೋರಿಸುತ್ತಲೇ ಸಾರುವ ಸಂದೇಶವನ್ನು ಮನಂಬುಗುವಂತೆ ಎತ್ತಿತೋರಿಸಿದ್ದಾರೆ. ಸರಳ ಕವನಗಳನ್ನು ಇನೂ ಸರಳವಾಗುವಂತೆ ವಿವರಿಸುವ ಶಕ್ತಿಯನ್ನು ತಳವಾರರಿಂದ ಕಲಿಯಬೇಕೆನ್ನುವಂತೆ ಬರೆದಿದ್ದಾರೆ. ಲೇಖಕರ ಹೃದಯ, ಮನಸ್ಸು, ಬುದ್ಧಿ ಅಂತಃಕರಣಗಳು ಕವನಗಳಲ್ಲಿ ಮಕ್ಕಳ ಮನಸ್ಸನ್ನು ಸೆಳೆಯುವ ಶಬ್ದಗಳಾಗಿ ಹೇಗೆ ರೂಪಗೊಂಡಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಅವರ ವಿವರಣೆಯನ್ನು ಓದುವದೇ ಒಂದು ಸೊಗುಸು ಎಂಬಂತೆ ಕಾಣುತ್ತದೆ. ತಳವಾರರ ಚಿತ್ರಕ ಶೈಲಿ ತುಂಬಾ ಹೃದಯಂಗಮವಾಗಿದೆ ಎನ್ನುತ್ತಾರೆ ರವೀಂದ್ರ ಕರ್ಜಗಿ.
©2025 Book Brahma Private Limited.