ನಾವು ಭಾರತೀಯರು

Author : ಮೌಲಾಲಿ ಕೆ. ಆಲಗೂರ

Pages 80

₹ 80.00




Year of Publication: 2021
Published by: ನಬೀ ರೋಶನ್‌ ಪ್ರಕಾಶನ
Address: ಬೊರಗಿ, ಸಿಂದಗಿ ಜಿಲ್ಲೆ, ವಿಜಯಪುರ

Synopsys

ಲೇಖಕ ಮೌಲಾಲಿ ಕೆ. ಆಲಗೂರ ಅವರ ಶಿಶುಗೀತೆಗಳ ಕೃತಿ ʻನಾವು ಭಾರತೀಯರುʼ. ಪುಸ್ತಕದ ಮುನ್ನುಡಿಯಲ್ಲಿ ಸಾಹಿತಿ ಡಾ. ನಾ. ಡಿಸೋಜ ಅವರು, “ಭಾರತಾಂಬೆಯ ಮುಂದೆ ನಾವೆಲ್ಲರೂ ಒಂದೇ, ಸಕಲ ಜೀವರಾಶಿಗಳಿಗೂ ಒಬ್ಬನೇ ತಂದೆ ಎಂದು ಪ್ರಾರಂಭದಲ್ಲಿಯೇ ಸಾರುವ ಕವಿ ನಮ್ಮ ದೇಶ ನಾಡು, ನೆಲ, ಜಲ, ಗಾಳಿ, ಅನ್ನ, ನೀರು ಇವುಗಳ ಮಹತ್ವ ಹೇಳುತ್ತಾ “ಕಾಯಕದಿ ನಿತ್ಯ ಕಾಣಬೇಕಿದೆ ದೇವರನ್ನ, ಕೋಮು ದ್ವೇಷವ ಮರೆತು ಎಳೆಯಬೇಕಿದೆ ದೇಶದ ಪ್ರಗತಿಯ ತೇರನ್ನು” ಎಂದು ಬರೆಯುತ್ತಾರೆ. ಇದೇ ಧಾಟಿಯಲ್ಲಿ ನಾವು ಭಾರತೀಯರು, ಕಟ್ಟೋಣ ಬನ್ನಿ ನಾಡೊಂದನ್ನು, ವಿಶ್ವಗುರು ಭಾರತ ಮೊದಲಾದ ಭಾವೈಕ್ಯತೆ ತಿಳಿಸುವ ಕವಿತೆಗಳನ್ನು ಅವರು ರಚಿಸಿದ್ದಾರೆ. ಕವಿ, ಮಕ್ಕಳು ಸಹಜವಾಗಿ ಆಕರ್ಷಣೆಗೆ ಒಳಗಾಗುವ ವಿಷಯಗಳ ಕುರಿತು ಗಮನ ಹರಿಸುತ್ತಾರೆ. ಅದು ಸಂಕ್ರಾಂತಿ, ಯುಗಾದಿ, ಹೋಳಿ ಓಕುಳಿ, ಸ್ನೇಹಿತರು, ಅಪ್ಪ, ಶಿಕ್ಷಕ, ದೀಪಾವಳಿ, ಸ್ವಾತಂತ್ರ್ಯ ಹಬ್ಬ ಕುರಿತು ಬರೆಯುತ್ತಾರೆ. ಎಲ್ಲ ಕವಿತೆಗಳಲ್ಲಿ ಮಕ್ಕಳಿಗೆ ಹಿಡಿಸುವ ಹಾಗೆ ಬರೆದಿದ್ದಾರೆ ಎಂಬುದೇ ಮುಖ್ಯ. ಕವಿತೆಗಳು ಇಡೀ ಕಟ್ಟುವುದರಲ್ಲಿ ಶೈಲಿ ಭಾಷೆಯಲ್ಲಿ, ಶಿಸ್ತು ಛಂದಸ್ಸಿನಲ್ಲಿ, ಧ್ವನಿಯಲ್ಲಿ ಯಶಸ್ಸನ್ನು ಪಡೆಯುವಂತೆ ಬರೆದಿದ್ದಾರೆ ಎನ್ನುವುದೇ ಮುಖ್ಯ” ಎಂದು ಹೇಳಿದ್ದಾರೆ.

About the Author

ಮೌಲಾಲಿ ಕೆ. ಆಲಗೂರ
(01 September 1991)

ಮೌಲಾಲಿ ಕೆ. ಆಲಗೂರ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೋರಗಿ ಗ್ರಾಮದವರು. ತಂದೆ ಖತಾಲಸಾಬ ಹಾಗೂ ತಾಯಿ ಜೈನಾಬಿ. ಪ್ರಸ್ತುತ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ, ಆಡುಗೋಡಿ ಪೊಲೀಸ್ ಶ್ವಾನದಳದಲ್ಲಿ ಆರಕ್ಷಕ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಣ್ಣವಯಸ್ಸಿನಿಂದಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು, ವೃತ್ತಿಯ ಜೊತೆಗೆ ಸಾಹಿತ್ಯವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕನ್ನಡದ ಹೆಸರಾಂತ ದಿನಪತ್ರಿಕೆ, ಮಾಸ ಪತ್ರಿಕೆಗಳಲ್ಲಿ 150ಕ್ಕೂ ಅಧಿಕ ಲೇಖನ, ಅಂಕಣ, ಕವನ, ಶಿಶುಗೀತೆಗಳು, ಪ್ರೇಮಗೀತೆಗಳು ಪ್ರಕಟಗೊಂಡಿವೆ. ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸ್ನೇಹ, ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪೊಲೀಸರ ಅಭಯ, ಕೊರೊನಾ ಜಾಗೃತಿ ಗೀತೆ, ...

READ MORE

Related Books