ಬಣ್ಣದ ಚಿಟ್ಟೆ ಮನೆಯ ಮುಂದೆ ತೋಟದಲ್ಲಿ ಹೂವು ಇದ್ದಿತು ಹೂವ ಮೇಲೆ ಚಿಟ್ಟೆಯೊಂದು ನಲಿಯುತಿದ್ದಿತು ಚಿಟ್ಟೆಯನ್ನು ಕಂಡು ಪುಟ್ಟಿ ಓಡಿ ಬಂದಳು ತನ್ನ ಪುಟ್ಟ ಕೈಯ ಚಾಚಿ ಹಿಡಿದುಕೊಂಡಳು ಬಣ್ಣ ಬಣ್ಣ ರೆಕ್ಕೆ ಚೆಂದ ಅಂದುಕೊಂಡಳು ‘ಆಡಲಿರಲಿ ಜೊತೆಗೆ’ ಎಂದು ಮನೆಗೆ ತಂದಳು ಪುಟ್ಟಿ, ಸಣ್ಣ ಪೆಟ್ಟಿಯಲ್ಲಿ ಚಿಟ್ಟೆ ಇಟ್ಟಳು ಚಿಟ್ಟೆ ಪೆಟ್ಟಿಯಲ್ಲಿ ಪುಟ್ಟ ಮೊಟ್ಟೆ ಇಟ್ಟಿತು ರೊಟ್ಟಿ ತಂದು ಕೊಡಲು ಎಂದು ಪೆಟ್ಟಿ ತೆರೆದಳು ಮೊಟ್ಟೆ ಅಲ್ಲೆ ಬಿಟ್ಟು ಚಿಟ್ಟೆ ಹಾರಿ ಹೋಯಿತು ಪುಟ್ಟಿ ದಿನವೂ ಮೊಟ್ಟೆಯನ್ನು ನೋಡುತಿದ್ದಳು ಮೊಟ್ಟೆಯೊಡೆದು ಪುಟ್ಟ ಮರಿಯು ಹೊರಗೆ ಬಂದಿತು ರೆಕ್ಕೆಯಿಲ್ಲದಂಥ ಮರಿಯು ಕಪ್ಪಗಿದ್ದಿತು ಹುಳುವ ಕಂಡು ಪುಟ್ಟಿ ಮೊಗವು ಸಪ್ಪಗಾಯಿತು ಹುಳುವು ಕಚ್ಚಿಬಿಡುವುದೆಂದು ಹೆದರಿಬಿಟ್ಟಳು ಅದನು ತಂದು ಎಲೆಯ ಮೇಲೆ ಬಿಟ್ಟುಬಿಟ್ಟಳು ಎಲೆಯ ತಿಂದು ಪುಟ್ಟ ಹುಳುವು ಬೆಳೆಯತೊಡಗಿತು ಬೆಳೆದುದಾದ ಮೇಲೆ ಗೂಡು ಕಟ್ಟತೊಡಗಿತು ಗೂಡಿನೊಳಗೆ ಕಾಣದಂತೆ ಸೇರಿಕೊಂಡಿತು ಕೆಲವು ದಿನಕೆ ಗೂಡು ಕೊರೆದು ಹೊರಗೆ ಬಂದಿತು ಹೊರಗೆ ಬಂದ ಹುಳುವು ಈಗ ಪುಟ್ಟ ಚಿಟ್ಟೆಯು ಬಣ್ಣ ಬಣ್ಣ ರೆಕ್ಕೆಯಲ್ಲಿ ಹಲವು ಪಟ್ಟೆಯು ಅದನು ಕಂಡು ಪುಟ್ಟಿ ಮನಕೆ ಹರುಷವಾಯಿತು ‘ಆಡಲಿರಲಿ’ ಎನುವ ಆಸೆ ಮತ್ತೆ ಮೂಡಿತು !
©2024 Book Brahma Private Limited.